ಬಳ್ಳಾರಿ : ಕಳೆದ ಉಪಚುನಾವಣೆಯಲ್ಲಿ ಸಂಡೂರಲ್ಲಿ ಸೋಲಲು ನಾನೇ ಕಾರಣ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಹೇಳಿಕೆಯಿಂದ ನನಗೆ ನೋವಾಗಿದ್ದು, ಪಕ್ಷ ಬಿಡು ಎಂದರೆ ಬಿಡುತ್ತೇನೆ ಎಂದು ಬಿಜೆಪಿ ಮಾಜಿ ಸಚಿವ ಶ್ರೀರಾಮುಲು ಹೇಳಿಕೆ ನೀಡಿದ್ದಾರೆ. ಇದರ ಮಧ್ಯ ಬಿಜೆಪಿ ಪರಾಜೀತ ಅಭ್ಯರ್ಥಿ ಬಂಗಾರು ಹನುಮಂತು ಶ್ರೀರಾಮುಲು ವಿರುದ್ಧ ಕಿಡಿ ಕಾರಿದು 2023ರಲ್ಲೂ ಕೂಡ ನಾನು ಟಿಕೆಟ್ ಆಕಾಂಕ್ಷಿಯಾಗಿದ್ದು, ವಿಧಾನಸಭಾ ಟಿಕೆಟ್ ನನಗೆ ಟಿಕೆಟ್ ತಪ್ಪಲು ಇದೇ ಶ್ರೀರಾಮುಲು ಕಾರಣ ಎಂದು ಅಸಮಧಾನ ಹೊರಹಾಕಿದ್ದಾರೆ.
ಹೌದು ಮಾಜಿ ಸಚಿವ ಬಿ.ಶ್ರೀರಾಮುಲು ವಿರುದ್ಧ ಇದೀಗ ಬಂಗಾರು ಹನುಮಂತ ಅಸಮಾಧಾನ ವ್ಯಕ್ತಪಡಿಸಿದ್ದು, ಈ ಕುರಿತು ಕಳೆದ ಎರಡು ದಿನಗಳ ಹಿಂದೆ ಪ್ರತ್ಯೇಕವಾಗಿ ಸಭೆ ನಡೆಸಿದ್ದಾರೆ. ರಾತ್ರೋರಾತ್ರಿ ಸಭೆ ನಡೆಸಿ ಶ್ರೀರಾಮುಲು ವಿರುದ್ಧ ಹನುಮಂತು ರಣತಂತ್ರ ಹೆಣದಿದ್ದಾರೆ. ಸಭೆಯಲ್ಲಿ ಯಾವುದೇ ಕಾರಣಕ್ಕೂ ಶ್ರೀರಾಮುಲು ಕೂಡ್ಲಿಗಿ ಕ್ಷೇತ್ರಕ್ಕೆ ಬರೋದು ಬೇಡ. ಸ್ಥಳೀಯರಿಗೆ ಟಿಕೆಟ್ ಕೇಳೋಣ ಎಂದು ಸಭೆಯಲ್ಲಿ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ವರಿಷ್ಟರಿಗೆ ಮನವರಿಕೆ ಮಾಡಿ ಕೊಡೋಣ ಎಂದು ಸಭೆಯಲ್ಲಿ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಸಭೆಯಲ್ಲಿ ಶ್ರೀರಾಮುಲು ವಿರುದ್ಧ ಬಂಗಾರು ಹನುಮಂತು ಅಸಮಾಧಾನ ಹೊರಹಾಕಿದ್ದಾರೆ. 2023 ರ ಚುನಾವಣೆಯಲ್ಲಿ ಕೂಡ್ಲಿಗಿಯಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆಗ ನನಗೆ ಕೂಡ್ಲಿಗಿ ಟಿಕೆಟ್ ಕೈತಪ್ಪಲು ಇದೇ ಶ್ರೀರಾಮುಲು ಕಾರಣ. ಕಾಂಗ್ರೆಸ್ ನಲ್ಲಿದ್ದ ಲೊಕೇಶ ನಾಯಕ್ ಕರೆತಂದು ಟಿಕೆಟ್ ಕೊಡಿಸಿದರು. ನಾನು ಗೆಲ್ಲುವ ಸಾಧ್ಯತೆ ಇದ್ದರೂ ಕೂಡ ಟಿಕೆಟ್ ತಪ್ಪಿಸಿದ್ದು ಇದೇ ಶ್ರೀರಾಮುಲು. ಆಗಲು ಸ್ಥಳೀಯ ನಾಯಕರಿಗೆ ಶ್ರೀರಾಮುಲು ಅನ್ಯಾಯ ಮಾಡಿದ್ದರು.
ಸಂಡೂರು ಉಪಚುನಾವಣೆಯ ವೇಳೆಯೂ ಕೂಡ ಶ್ರೀರಾಮುಲು ಹಾಗು ಅವರ ಪತ್ನಿ ಸಂಡೂರು ಟಿಕೆಟ್ ಕ್ಷೇತ್ರದ ಆಕಾಂಕ್ಷಿಯಾಗಿದ್ದರು.ಆದರೆ ನಮ್ಮ ಪಕ್ಷದ ಹೈಕಮಾಂಡ್ ಶ್ರೀರಾಮುಲುಗೆ ಮಣೆ ಹಾಕಲಿಲ್ಲ. ನನಗೆ ಟಿಕೆಟ್ ಘೋಷಣೆ ಮಾಡಿದ್ದಕ್ಕೆ ಶ್ರೀರಾಮುಲುಗೆ ಅಸಮಾಧಾನ ಇತ್ತು. ಆಗ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಪದೇಪದೇ ಕರೆ ಮಾಡಿದ್ದರು. ಬಂಗಾರು ಹನುಮಂತಗೆ ಹೇಗೆ ಟಿಕೆಟ್ ಘೋಷಿಸಿದ್ದೀರಿ ಅಂತ ಕೇಳಿದ್ದರು.
2028ಕ್ಕೆ ಕೂಡ್ಲಿಗಿ ಕ್ಷೇತ್ರದ ಮೀಸಲಾತಿ ಬದಲಾಗುವ ಸಾಧ್ಯತೆ ಇದೆ. ಜನರಲ್ ಬರಬಹುದು ಅಥವಾ ಎಸ್ಟಿ ಮೀಸಲಾತಿ ಬರಬಹುದು ಯಾವುದೇ ಬಂದರೂ ಸ್ಥಳೀಯರೇ ನಿಲ್ಲೋಣ. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಟಿಕೆಟ್ ಕೊಡುವುದು ಬೇಡ ಆರಂಭದಿಂದಲೂ ಸ್ಥಳೀಯರಿಗೆ ಶ್ರೀರಾಮುಲು ಅನ್ಯಾಯ ಮಾಡುತ್ತಾ ಬಂದಿದ್ದಾರೆ. ಈಗ ಮತ್ತೆ ಅನ್ಯಾಯ ಮಾಡೋಕೆ ಹೊರಟಿದ್ದಾರೆ. ಶ್ರೀರಾಮುಲು ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರು ಗೆಲ್ಲುತ್ತಾರೆ.
ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯ ಶ್ರೀರಾಮುಲುಗೂ ಅವರಿಗೆ ಇದೆ. ಆದರೆ ಶ್ರೀರಾಮುಲು ಕೂಡ್ಲಿಗಿ ಕ್ಷೇತ್ರಕ್ಕೆ ಬರುವುದು ಬೇಡ. ಜನವರಿ 26ರಂದು ಕೂಲಿಯಲ್ಲಿ ನಡೆಯುವ ಸಭೆಗೆ ಜನಾರ್ಧನ ರೆಡ್ಡಿ ಬರುತ್ತಾರೆ ಆಗ ನಾವೆಲ್ಲರೂ ಸ್ಥಳೀಯರಿಗೆ ಟಿಕೆಟ್ ಕೊಡುವಂತೆ ಒತ್ತಾಯಿಸೋಣ. ಈಗಾಗಲೇ ಶ್ರೀರಾಮುಲು ಕೂಡ್ಲಿಗಿಯಿಂದ ಸ್ಪರ್ಧೆ ಮಾಡುತ್ತೇನೆ ಎಂದಿದ್ದಾರೆ ವರಿಷ್ಟರ ಮುಂದೆ ಕೂಡ್ಲಿಗಿಯಿಂದ ಸ್ಪರ್ಧೆ ಮಾಡಿದ್ದೀನಿ ಎಂದು ಶ್ರೀರಾಮಲು ಹೇಳಿದ್ದಾರೆ ಎಂದು ಕಳೆದ ಎರಡು ದಿನಗಳ ಹಿಂದೆ ಬೆಂಬಲಿಗರೊಂದಿಗೆ ನಡೆದ ಸಭೆಯಲ್ಲಿ ಬಿಜೆಪಿ ಎಸ್‌ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರ ಹನುಮಂತು ಹೇಳಿಕೆ ನೀಡಿದರು.