ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಚಿಕ್ಕಮಂಗಳೂರಿನ 6 ಜನ ನಕ್ಸಲರು ಶರಣಾಗಿದ್ದರು. ಬಳಿಕ ಬೆಂಗಳೂರಿನ NIA ಕೋರ್ಟ್ 7 ದಿನಗಳ ಕಾಲ ಚಿಕ್ಕಮಂಗಳೂರು ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ನೀಡಿತ್ತು. ಇದೀಗ ನಾಳೆ ಈ ಒಂದು ಪೊಲೀಸ್ ಕಸ್ಟಡಿ ಆದೇಶ ಅಂತ್ಯವಾಗಲಿದೆ.
ಹೌದು 6 ಜನ ನಕ್ಸಲರ ಪೊಲೀಸ್ ಕಸ್ಟಡಿ ಅವಧಿ ನಾಳೆ ಅಂತ್ಯವಾಗಲಿದೆ. ಹಾಗಾಗಿ ನಾಳೆ ಕೋರ್ಟಿಗೆ ಪೊಲೀಸರು ನಕ್ಸಲರನ್ನು ಹಾಜರುಪಡಿಸಲಿದ್ದಾರೆ. ಬೆಂಗಳೂರಿನ NIA ಕೋರ್ಟಿಗೆ ಪೊಲೀಸರು 6 ಜನ ನಕ್ಸಲರನ್ನು ಹಾಜರುಪಡಿಸಲಿದ್ದಾರೆ. 7 ದಿನಗಳ ಕಾಲ ಚಿಕ್ಕಮಂಗಳೂರು ಪೊಲೀಸ್ ಕಸ್ಟಡಿಗೆ ನೀಡಿ NIA ಕೋರ್ಟ್ ಆದೇಶ ನೀಡಿತ್ತು. ತಮಗೂ ನಕ್ಸಲರ ವಿಚಾರಣೆ ನಡೆಸಲು ತಮಗೂ ಕಸ್ಟಡಿಗೆ ನೀಡುವಂತೆ ನಾಳೆ ಕೇರಳ ಪೊಲೀಸರು ಕೂಡ ಮನವಿ ಮಾಡುವ ಸಾಧ್ಯತೆ ಇದೆ.
NIA ಅಧಿಕಾರಿಗಳು ಕೂಡ ಈ 6 ಜನ ನಕ್ಸಲರ ವಿಚಾರಣೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮುಂಡಗಾರು ಲತಾ, ಸುಂದರಿ, ವನಜಾಕ್ಷಿ, ಜಯಣ್ಣ, ಜೀಶಾ, ಹಾಗೂ ವಸಂತಕುಮಾರ್ ನಕ್ಸಲರು ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗತಿಯಾಗಿದ್ದರು. ಚಿಕ್ಕಮಂಗಳೂರು ಪೊಲೀಸರಿಂದ 6 ಜನಗಳ ನಕ್ಸಲರ ವಿಚಾರಣೆ ನಡೆದಿದೆ. ಹಳೆ ಪ್ರಕರಣಗಳು ಹಾಗೂ ಶಸ್ತ್ರಾಸ್ತ್ರಗಳ ಸಂಬಂಧ ಪೊಲೀಸರು ತನಿಖೆ ನಡೆಸಿದ್ದಾರೆ.