ಮಹಾರಾಷ್ಟ್ರ : ರೈಲಿನಲ್ಲಿ ಬೆಂಕಿ ಹೊತ್ತಿಕೊಂಡಿರುವ ವಿಷಯ ತಿಳಿದು, ಪ್ರಯಾಣಿಕರು ಇಳಿಯುವ ಭರದಲ್ಲಿ ಇನ್ನೊಂದು ಹಳಿಯ ಮೇಲೆ ನಿಂತಿದ್ದಾರೆ. ಈ ವೇಳೆ ದೆಹಲಿಯಿಂದ ಆಗಮಿಸುತ್ತಿದ್ದ ಕರ್ನಾಟಕ ಎಕ್ಸ್ಪ್ರೆಸ್ ರೈಲು ನಿಂತಿದ್ದ ಪ್ರಯಾಣಿಕರ ಮೇಲೆ ಹರಿದಿದೆ. ಈ ವೇಳೆ ಸುಮಾರು 20 ಪ್ರಯಾಣಿಕರು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಜಲಗಾಂವ್ ನ ಪರಾಂಡ ನಿಲ್ದಾಣದಲ್ಲಿ ಈ ಒಂದು ಘೋರ ದುರಂತ ಸಂಭವಿಸಿದೆ.
ಹೌದು ರೈಲು ನಿಲ್ದಾಣದಲ್ಲಿ ನಿಂತಿದ್ದಾಗ ಬೆಂಕಿ ಹತ್ತಿಕೊಂಡಿದೆ ಎಂದು ವದಂತಿ ಹಬ್ಬಿಸಲಾಗಿದೆ. ಈ ವೇಳೆ ಆತಂಕ್ಕಕ್ಕೊಳಗಾದ ಪ್ರಯಾಣಿಕರು ಗಡಿಬಿಡಿಯಲ್ಲಿ ಪಕ್ಕದಲ್ಲಿರುವ ಇನ್ನೊಂದು ಹಳಿಗೆ ಇಳಿದಾಗ ಇನ್ನೊಂದು ಕಡೆಯಿಂದ ಕರ್ನಾಟಕ ಎಕ್ಸ್ಪ್ರೆಸ್ ರೈಲು ಬಂದಿದೆ.ಈ ವೇಳೆ ರೈಲು ಹರಿದು ಸುಮಾರು 20 ಪ್ರಯಾಣಿಕರು ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಕುರಿತಂತೆ ಮೊದಲು ಪ್ರಯಾಣಿಕರು ಚೈನ್ ಎಳೆದು ಹಳಿಗೆ ಜಿಗಿದಿದ್ದಾರೆ. ಈ ವೇಳೆ ಮತ್ತೊಂದು ಅಳಿಯಲಿ ಬರುತ್ತಿದ್ದ ರೈಲು ಪ್ರಯಾಣಿಕರಿಗೆ ಡಿಕ್ಕಿ ಹೊಡೆದಿದೆ. ಪ್ರಯಾಣಿಕರ ಮೇಲೆ ಕರ್ನಾಟಕ ಎಕ್ಸ್ಪ್ರೆಸ್ ರೈಲು ಹರಿದಿದೆ ಎಂದು ಸೆಂಟ್ರಲ್ ರೈಲ್ವೆ CPRO ಡಾ. ಸ್ವನಿಲ್ ಮಾಹಿತಿ ನೀಡಿದ್ದಾರೆ. ಆದರೆ ಚೈನ್ ಎಳೆಯಲು ಕಾರಣವೇನು ಎಂದು ಮಾಹಿತಿ ಸಿಕ್ಕಿಲ್ಲ ಎಂದು ಸ್ವಾನಿಲ್ ತಿಳಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.