ಹುಬ್ಬಳ್ಳಿ : ವಿವಾಹಿತೆಯ ಜೊತೆ ಮಾತನಾಡಿದ್ದಕ್ಕೆ, ವಿವಾಹಿತೆಯ ಸಂಬಂಧಿಕರು ಯುವಕನನ್ನು ಅಪಹರಿಸಿ ಬೆತ್ತಲೆ ಗೊಳಿಸಿ ಬ್ಲೇಡ್ ನಿಂದ ಸಿಕ್ಕಸಿಕ್ಕ ಕಡೆ ಕುಯ್ದಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಇದೀಗ ಹುಬ್ಬಳ್ಳಿಯ ಕಸಬಾ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ಹಲ್ಲೆಗೆ ಒಳಗಾದ ಯುವಕ ಮುಜಾಫಿರ್ ನನ್ನು ನಿನ್ನೆ 10 ರಿಂದ 15 ಜನರ ಗುಂಪು ಹಲ್ಲೆ ಮಾಡಿದ್ದು ಬೆತ್ತಲೆ ಮಾಡಿ ಬ್ಲೇಡ್ ನಿಂದ ಆರೋಪಿಗಳು ಇರಿದಿದ್ದರು. ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಮೂವರನ್ನು ಅರೆಸ್ಟ್ ಮಾಡಿದ್ದಾರೆ.