ಮೈಸೂರು : ಮುಡಾ ಕಚೇರಿಗೆ ಸಂಬಂಧಪಟ್ಟಂತೆ ಇದೀಗ ಮೈಸೂರಲ್ಲಿರುವ ಮುಡಾ ಕಚೇರಿಯ ಮೇಲೆ ಇದೀಗ ಲೋಕಾಯುಕ್ತ ಅಧಿಕಾರಿಗಳು ಏಕಾಏಕಿ ದಾಳಿ ಮಾಡಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಲೋಕಾಯುಕ್ತ ಎಸ್ಪಿ ಟಿಜೆ ಉದೇಶ್ ನೇತೃತ್ವದಲ್ಲಿ ಈ ಒಂದು ದಾಳಿ ನಡೆದಿದೆ.ಈ ವೇಳೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ
ಹೌದು ಮುಡಾ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದು, ಕುತೂಹಲಕ್ಕೆ ಕಾರಣವಾದ ಲೋಕಾಯುಕ್ತ ಎಸ್ಪಿ ನಡೆ. ಲೋಕಾಯುಕ್ತ ಎಸ್ಪಿ ಟಿಜೆ ಉದೇಶ ನೇತೃತ್ವದಲ್ಲಿ ಇದೀಗ ಮುಡಾ ಕಛೇರಿ ಮೇಲೆ ದಾಳಿ ನಡೆಸಿದೆ. ದಾಳಿಯ ವೇಳೆ ಮುಡಾ ಕಚೇರಿಗೆ ಲೋಕಾಯುಕ್ತ ಅಧಿಕಾರಿಗಳು ಅಲ್ಲಿಗೆ ಊಟ ತರಿಸಿಕೊಂಡಿದ್ದಾರೆ.
ಇದೆ ವೇಳೆ ಮುಡಾ ಆಯುಕ್ತ ರಘುನಂದನ್ ರಜೆಯ ಮೇಲೆ ಇದ್ದಾರೆ. ಕಮಿಷನರ್ ರಘುನಂದನ್ ಅನುಪಸ್ಥಿತಿಯಲ್ಲಿ ಇದೀಗ ಲೋಕಾಯುಕ್ತ ಅಧಿಕಾರಿಗಳು ರೆಡ್ ಮಾಡಿದ್ದಾರೆ. ಕಳೆದ 2020 ನವೆಂಬರ್ 11 ರಂದು ಮುಡಾ ಸಭಾಂಗಣದಲ್ಲಿ ನಡೆದ ನಡಾವಳಿ ಸಭೆಯ ಕುರಿತು ಮಾಹಿತಿ ಪಡೆಯಲಿದ್ದು ನಡಾವಳಿಯ ಧ್ವನಿ ಸುರುಳಿಯನ್ನು ಅಧಿಕಾರಿಗಳು ಕೇಳಿಸಿಕೊಂಡಿದ್ದಾರೆ.
ಅಂದು ಸಭೆಯಲ್ಲಿ ಸದಸ್ಯರು ಮಾತನಾಡಿರುವ ಧ್ವನಿಸುರುಳಿಯನ್ನು ಕೇಳಿಸಿಕೊಂಡಿದ್ದಾರೆ. ಅಲ್ಲದೇ ಪ್ರಮುಖ ಧ್ವನಿ ಸುರುಳಿಗಳನ್ನು ಇದೀಗ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ ಹಾಗಾಗಿ ಮುಡಾ ಪ್ರಕರಣ ಇದೀಗ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪಿದ್ದು, ಸಿಎಂ ಸಿದ್ದರಾಮಯ್ಯ ಅವರ ಮುಂದಿನ ಭವಿಷ್ಯ ಏನಾಗಲಿದೆ ಎಂದು ತಿಳಿದು ಬರಲಿದೆ.