ಬಾಗಲಕೋಟೆ : ಪ್ರತಿ ವರ್ಷ ಬೇಸಿಗೆ ಆರಂಭವಾದರೆ ಸಾಕು, ಲೋಡ್ ವೆಡ್ಡಿಂಗ್ ನಿಂದ ಜನರು ಹೈರಾಣಾಗುತಾರೆ. ಒಂದು ಕಡೆ ವಿಪರೀತ ಸುಡುವ ಬಿಸಿಲು ಆದರೆ ಇನ್ನೊಂದು ಕಡೆ ಲೋಡ್ ಶೆಡ್ಡಿಂಗ್ ನಿಂದ ಜನರು ವಿದ್ಯುತ್ ಇಲ್ಲದೆ ಸೆಕೆಯಿಂದ ಬೇಸತ್ತು ಹೋಗುತ್ತಾರೆ. ಆದರೆ ಈ ಬಾರಿ ರಾಜ್ಯದ ಜನತೆಗೆ ಸಿಹಿ ಸುದ್ದಿ ಒಂದು ಇದ್ದು, ಈ ಬಾರಿ ಬೇಸಿಗೆಯಲ್ಲಿ ಯಾವುದೇ ರೀತಿಯ ಲೋಡ್ ಶೇಡ್ಡಿಂಗ್ ಮಾಡಲ್ಲ ಎಂದು ಇಂಧನ ಸಚಿವ ಕೆಜೆ ಜಾರ್ಜ್ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಬಾರಿ ಬೇಸಿಗೆ ಸಂದರ್ಭದಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ. ರಾಜ್ಯದಲ್ಲಿ ಬರಗಾಲ ಇದ್ದಾಗಲೇ ಲೋಡ್ ಶೆಡ್ಡಿಂಗ್ ಮಾಡಿಲ್ಲ. ಹೀಗಾಗಿ ಈ ವರ್ಷ ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ ಇರುವುದಿಲ್ಲ ಎಂದು ತಿಳಿಸಿದರು.
ಒಂದು ವೇಳೆ ವಿದ್ಯುತ್ ಕೊರತೆ ಉಂಟಾದರೆ ಬೇರೆ ಕಡೆಯಿಂದ ವಿದ್ಯುತ್ ಖರೀದಿಸುತ್ತೇವೆ.ಈ ವರ್ಷವೂ ಬೇಡಿಗೆ ಜಾಸ್ತಿಯಾಗಿದೆ. ಈಗ 16 ರಿಂದ 17 ಸಾವಿರ ಮೆಗಾ ವೇಟ್ ಬೇಡಿಕೆ ಬರ್ತಾ ಇದೆ. ಕೊರತೆ ಉಂಟಾದರೆ ನಾವು ಬೇರೆ ಕಡೆಯಿಂದ ಖರೀದಿ ಮಾಡುತ್ತೇವೆ ಎಂದು ಬಾಗಲಕೋಟೆಯಲ್ಲಿ ಇಂಧನ ಖಾತೆಯ ಸಚಿವ ಕೆಜೆಆರ್ ಹೇಳಿಕೆ ನೀಡಿದರು.