ವಿಜಯಪುರ : ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿ ಮಾಡಿರುವ 5 ಗ್ಯಾರಂಟಿ ಯೋಜನೆಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ವಿಪಕ್ಷಗಳು ಆರೋಪ ಮಾಡುತ್ತಲೇ ಬಂದವು. ಆದರೆ ಈ ಗ್ಯಾರಂಟಿ ಯೋಜನೆಗಳಿಂದ ಅದೆಷ್ಟೋ ಮಹಿಳೆಯರು ಸ್ವಾವಲಂಬಿಗಳಾಗಿ ಜೀವನ ನಡೆಸುತ್ತಿದ್ದಾರೆ. ಅದಕ್ಕೆ ಮತ್ತೊಂದು ಉದಾಹರಣೆ ಎಂಬಂತೆ ಇದೀಗ ಕರ್ನಾಟಕ ಮಹಾರಾಷ್ಟ್ರ ಗಡಿ ಭಾಗದಲ್ಲಿರುವ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಶಿರಾಡೋಣ ಗ್ರಾಮದಲ್ಲಿ ಮಹಿಳೆಯೊಬ್ಬರು ಪತ್ರಾಸ್ ಮನೆ ಕಟ್ಟಿಕೊಂಡಿದ್ದಾರೆ.
ಹೌದು ಶಿರಾಡೋಣ ಗ್ರಾಮದ ಗೃಹಿಣಿ ನೀಲಾಬಾಯಿ ಗಂಗಣ್ಣ ಪಾಂಡ್ರೆ ತಮಗೆ ಬಂದ ಗೃಹಲಕ್ಷ್ಮಿ ಹಣ 30 ಸಾವಿರದೊಂದಿಗೆ ಇನ್ನಷ್ಟು ಹಣ ಹೊಂದಿಸಿಕೊಂಡು 1 ಲಕ್ಷ ವೆಚ್ಚದಲ್ಲಿ ಪತ್ರಾಸ್ ಮನೆ ನಿರ್ಮಿಸಿಕೊಂಡಿದ್ದಾರೆ. ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ನೀಲಾಬಾಯಿ ಅವರು ನಮಗೆ ಸ್ವಂತ ಮನೆ ಇರಬೇಕು ಎಂಬ ಆಸೆ ಬಹಳ ದಿನಗಳಿಂದ ಇತ್ತು, ಇದೀಗ ಗೃಹಲಕ್ಷ್ಮಿ ಹಣದಿಂದ ಕೂಡಿಟ್ಟ ಹಣದಲ್ಲಿ ಈ ಒಂದು ಮನೆ ನಿರ್ಮಿಸಿದ್ದೇವೆ ಎಂದು ಸಂತಸ ಹಂಚಿಕೊಂಡರು.
ಮನೆಗೆ ‘ಗೃಹಲಕ್ಷ್ಮಿ ನಿಲಯ’ ಎಂದು ನಾಮಕರಣ ಮಾಡಿದ್ದೂ ಅಲ್ಲದೆ, ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಭಾವಚಿತ್ರವನ್ನು ಅಂಟಿಸಿ ಸಿದ್ಧರಾಮಯ್ಯ ಕೃಪೆ ಎಂದು ಬರೆಸಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸಂಪೂರ್ಣವಾಗಿ ದೇವಾಲಯ ಆಗುತ್ತೆ ಆರ್ಥಿಕವಾಗಿ ಹಿಂದುಳಿಯುತ್ತದೆ ಎಂದು ವಿಪಕ್ಷಗಳು ಕಾಂಗ್ರೆಸ್ ಸರ್ಕಾರದ ವಿರುದ್ಧ ಆರೋಪಿಸುತ್ತಲೇ ಬಂದವು ಆದರೆ ಇದೀಗ ಈ ಒಂದು ಯೋಜನೆಗಳಿಂದ ಅದೆಷ್ಟೋ ಮಹಿಳೆಯರಿಗೆ ಅನುಕೂಲ ಆಗಿದೆ ಆಗುತ್ತಿದೆ ಎಂಬುದು ತಿಳಿದು ಬಂದಿದೆ.