ಬೆಂಗಳೂರು : ಗುತ್ತಿಗೆದಾರನಿಗೆ ಕೊಲೆ ಬೆದರಿಕೆ ಆರೋಪ ಹಾಗೂ ಮಹಿಳೆ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಬೆಂಗಳೂರಿನ ಆರ್ ಆರ್ ನಗರದ ಬಿಜೆಪಿ ಶಾಸಕ ಮುನಿರತ್ನ ಅವರು ಈಗಾಗಲೇ ಜೈಲಿಗೆ ಹೋಗಿ ಬಿಡುಗಡೆಯಾಗಿದ್ದಾರೆ. ಇದೀಗ ಅವರ ವಿರುದ್ಧ ಮತ್ತೊಂದು fir ದಾಖಲಾಗಿದ್ದು ಸ್ಲಂ ಏರಿಯಾದಲ್ಲಿನ ದಿನಗೂಲಿ ಕೆಲಸಗಾರರ ಮೇಲೆ ದೌರ್ಜನ್ಯ ಎಸಗಿದ್ದ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರಿನ RMC ಯಾಡ್ ಪೊಲೀಸ್ ಠಾಣೆಯಲ್ಲಿ ಜನಗೂಲಿ ನೌಕರರು ಮುನಿರತ್ನ ವಿರುದ್ಧ FIR ದಾಖಲಿಸಿದ್ದಾರೆ.
ಹೌದು ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್ ದಾಖಲಾಗಿದೆ. ದಿನಗೂಲಿ ಕೆಲಸ ಮಾಡುವವರ ಮೇಲೆ ದೌರ್ಜನ್ಯ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅಕ್ಕಮಹಾದೇವಿ ನೌಕರರು ಬೆಂಗಳೂರು ಪೀಣ್ಯ ಪ್ರಥಮ ದರ್ಜೆ ಕಾಲೇಜು ಬಳಿಯ ಸ್ಲಂನಲ್ಲಿರುವ ದಿನಗೂಲಿ ನೌಕರರ ಮೇಲೆ ಮುನಿರತ್ನ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಮುನಿರತ್ನ ಮತ್ತು ಸಹಚರರಿಂದ ಮನೆಗಳ ನೆಲಸಮ ಆರೋಪ ಕೇಳಿ ಬಂದಿದೆ.ವಸಂತ್ ಕುಮಾರ್, ಚನ್ನಕೇಶವ, ನವೀನ್, ರಾಮ, ಕಿಟ್ಟಿ ಗಂಗಾ ಎಂಬುವವರು ಮನೆಯನ್ನು ನೆಲಸಮ ಮಾಡಿಸಿದ್ದಾರೆ ಎಂದು ಇದೀಗ ದೂರು ನೀಡಿದ್ದಾರೆ.ಅಲ್ಲದೆ ಮನೆಯಲ್ಲಿದ್ದ 20 ರಿಂದ 70 ಹಣ ಹಾಗೂ 30 ಗ್ರಾಂ ಚಿನ್ನ ಮಣ್ಣು ಪಾಲಾಗಿದೆ. ಮುನಿರತ್ನ ರಾಜಕೀಯ ಪ್ರಭಾವ ಬಳಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಬೆಂಗಳೂರಿನ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.