ಬೆಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ನಟ ದರ್ಶನ್ ಅವರ ಬಳಿ ಇರುವ ಎರಡು ಗನ್ ಲೈಸೆನ್ಸ್ ಅಮಾನತುಗೊಳಿಸಿ ಇದೀಗ ಪೊಲೀಸ್ ಆಡಳಿತ ವಿಭಾಗ ಸೂಚನೆ ಹೊರಡಿಸಿದ್ದು ಎರಡು ಕಣ್ಣುಗಳನ್ನು ವಶಕ ಪಡೆಯುವಂತೆ ಬೆಂಗಳೂರಿನ ನಗರ ಠಾಣೆಯ ಪೊಲೀಸರಿಗೆ ಸೂಚಿಸಲಾಗಿದೆ.
ಹೌದು ಕೊಲೆ ಆರೋಪಿ ದರ್ಶನ್ ಗನ್ ಲೈಸೆನ್ಸ್ ಅಮಾನತು ಮಾಡಿ ಪೊಲೀಸ್ ಇಲಾಖೆ ಆಡಳಿತ ವಿಭಾಗದಿಂದ ಇದೀಗ ಸೂಚನೆ ನೀಡಲಾಗಿದೆ. ಆರ್ ಆರ್ ನಗರ ಠಾಣೆಯ ಪೊಲೀಸರಿಗೆ ಈ ಕುರಿತು ಸೂಚನೆ ನೀಡಿದ್ದು, ಎರಡು ಗನ್ ಗಳನ್ನು ವಶಕ್ಕೆ ಪಡೆದುಕೊಳ್ಳಲು ಸೂಚನೆ ಕೊಡಲಾಗಿದೆ. ಪ್ರಕರಣದ ಟ್ರಯಲ್ ಮುಗಿಯುವವರೆಗೂ ಲೈಸೆನ್ಸ್ ಅಮಾನತು ಮಾಡಿ ಎಂದು ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.