ಬೆಂಗಳೂರು : ರಾಜ್ಯದಲ್ಲಿ ಸಾಲು ಸಾಲು ದರೋಡೆ ಪ್ರಕರಣಗಳು ನಡೆಯುತ್ತಿವೆ. ನಿನ್ನೆ ಮೈಸೂರಲ್ಲಿ ಕೇರಳ ಮೂಲದ ಉದ್ಯಮಿಯ ಹಣ ಹಾಗೂ ಕಾರಿನ ಸಮೇತ ದರೋಡೆ ಮಾಡಿದರೆ ಹುಬ್ಬಳ್ಳಿಯಲ್ಲಿ ಕೆನರಾ ಬ್ಯಾಂಕ್ ಅನ್ನು ಖದೀಮರು ದರೋಡೆಗೆ ಯತ್ನಿಸಿ ವಿಫಲರಾಗಿದ್ದಾರೆ.ಇದೀಗ ಬೆಂಗಳೂರಿನಲ್ಲಿ ಕೂಡ ಈ ಒಂದು ಮುಸುಕುಧಾರಿ ಗ್ಯಾಂಗ್ ಬೆಂಗಳೂರಿನ ಕೆಆರ್ ಪುರಂನಲ್ಲಿ ಪ್ರತ್ಯಕ್ಷವಾಗಿದೆ.
ಹೌದು ಮೂರು ಜನ ಕಳ್ಳರ ಈ ಒಂದು ಗ್ಯಾಂಗ್ ಕೈಯಲ್ಲಿ ಮಾರಾಕಸ್ತ್ರ ಹಿಡಿದುಕೊಂಡು ರಾತ್ರಿ 2.30 ರ ಸುಮಾರಿಗೆ ಮನೆ ಕಳ್ಳತನಕ್ಕೆ ಸ್ಕೆಚ್ ಹಾಕಿದ್ದಾರೆ. ಕೆಆರ್ ಪುರಂ ನ ಕಿತ್ತಗನೂರಿನಲ್ಲಿ ಮೂವರು ಕಳ್ಳರು ರೌಂಡ್ಸ್ ಹಾಕಿದ್ದಾರೆ. ರಾಜಾರೋಷವಾಗಿ ಮನೆಗಳ ಬಳಿ ಓಡಾಡಿರುವ ಗ್ಯಾಂಗ್ ಮುಸುಕು ಧರಿಸಿ ಮೂವರು ಖದೀಮರು ಎಂಟ್ರಿ ಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಹಜವಾಗಿ ಕೆಆರ್ ಪುರಂ ಸುತ್ತಮುತ್ತಲು ಏರಿಯಾಗಳಲ್ಲಿನ ಜನರಿಗೆ ಆತಂಕ ಸೃಷ್ಟಿಯಾಗಿದೆ.