ಬೀದರ್ : ರಾಶಿ ಮಾಡಿ ಕೂಡಿಟ್ಟಿದ್ದ ತೊಗರಿ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗೋಳಿ ಲಕ್ಷಾಂತರ ರೂಪಾಯಿ ಮೌಲ್ಯದ ತೊಗರಿ ಬೆಳೆ ಹೊತ್ತಿ ಉರಿದಿರುವ ಘಟನೆ ಬೀದರ್ ಜಿಲ್ಲೆಯ ಬಾಲಕಿ ತಾಲೂಕಿನ ಕೇಸರ ಜವಳಗ ಗ್ರಾಮದಲ್ಲಿ ಈ ಒಂದು ಅಗ್ನಿ ಅವಘಡ ಸಂಭವಿಸಿದೆ.
ಹೌದು ಕೆಸರ ಜವಳಗ ಗ್ರಾಮದಲ್ಲಿ ಈ ಒಂದು ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೀದರ್ ಜಿಲ್ಲೆಯ ಬಾಲಕಿ ತಾಲೂಕಿನ ಕೆಸರ ಜವಳಗ ಗ್ರಾಮದಲ್ಲಿ ಆಕಸ್ಮಿಕವಾಗಿ ಹೊತ್ತಿದ ಬೆಂಕಿಯಿಂದ ತೊಗರಿ ಬಣವೆ ಬೆಂಕಿಗೆ ಆಹುತಿಯಾಗಿದೆ. ಸುಮಾರು 45 ಕ್ವಿಂಟಲ್ ಗು ಅಧಿಕ ತೊಗರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಗ್ರಾಮದ ಪ್ರತಿಭಾ ಕೊಳೇಕರ್ ಎಂಬ ರೈತ ಮಹಿಳೆಗೆ ಈ ಒಂದು ತೊಗರಿ ಸೇರಿತ್ತು ಎನ್ನಲಾಗಿದೆ. ರಾಶಿ ಮಾಡಲು ಕೂಡಿ ಹಾಕಿದ್ದ ಬಣವೆಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಈ ಒಂದು ದುರಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ತೊಗರಿ ನಷ್ಟವಾಗಿದೆ. ಘಟನೆ ಕುರಿತು ಮೇಹಕಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.