ಚಿಕ್ಕಮಗಳೂರು : ಸಾವು ಯಾರಿಗೆ ಯಾವಾಗ ಹೇಗೆ ಬರುತ್ತದೆ ಎಂದು ಹೇಳಲಾಗುವುದಿಲ್ಲ. ಕಳೆದ ಕೆಲವು ದಿನಗಳ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ಕೆಲವೇ ದಿನಗಳಲ್ಲಿ ಹಸೆಮಣೆ ಎರಬೇಕಾಗಿದ್ದ ಯುವತಿ ಒಬ್ಬಳು ಭೀಕರವಾದ ಅಪಘಾತದಲ್ಲಿ ಸಾವನಪ್ಪಿದ್ದಳು. ಇದೀಗ ಚಿಕ್ಕಮಂಗಳೂರಿನಲ್ಲಿ ಹೃದಯವಿದ್ರಾವಕ ಘಟನೆ ನೆಡೆದಿದ್ದು ಮಗಳ ಮದುವೆಯ ಸಂಭ್ರಮದಲ್ಲಿದ್ದ ತಂದೆಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಮದುವೆಯ ಬಳಿಕ ತಂದೆ ಸಾವಿನ ಸುದ್ದಿ ಕುಟುಂಬಸ್ಥರಿಗೆ ತಿಳಿಸಲಾಗಿದೆ.
ಹೌದು ಮಗಳ ಮದುವೆ ಸಂಭ್ರಮದಲ್ಲಿದ್ದ ತಂದೆಯ ಸಾವನ್ನಾಪ್ಪಿದ್ದಾರೆ. ಹುಲಿತಿಮಾಪುರ ಬಳಿ ನಿನ್ನೆ ಅಪಘಾತದಲ್ಲಿ ಚಂದ್ರಪ್ಪ (45) ಎನ್ನುವವರು ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಹುಲಿತಿಮಾಪುರದಲ್ಲಿ ಈ ಒಂದು ಅಪಘಾತ ಸಂಭವಿಸಿದೆ.
ಮೃತ ಚಂದ್ರಪ್ಪ ತರೀಕೆರೆ ಪಟ್ಟಣದ ನಾಗಪ್ಪ ಕಾಲೋನಿ ನಿವಾಸಿಯಾಗಿದ್ದಾರೆ. ಮದುವೆ ನಿಲ್ಲಬಾರದೆಂಬ ಕಾರಣಕ್ಕೆ ಸಂಬಂಧಿಕರು ಚಂದ್ರಪ್ಪ ಸಾವಿನ ವಿಷಯ ಮುಚ್ಚಿಟ್ಟಿದ್ದರು. ಮದುವೆ ಮುಗಿದ ಬಳಿಕ ಸಂಬಂಧಿಕರು ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ. ಸದ್ಯ ಚಂದ್ರಪ್ಪ ಮೃತ ಪಟ್ಟಿರುವ ವಿಷಯ ತಿಳಿದು ಸದ್ಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.