ಬೆಂಗಳೂರು: ಬಿಎಂಟಿಸಿಯ ನಿರ್ವಾಹಕರ ಹುದ್ದೆಗೆ ಅರ್ಜಿ ಸಲ್ಲಿಸಿದ್ದವರಿಗೆ ಮಹತ್ವದ ಮಾಹಿತಿ ಎನ್ನುವಂತೆ, ಸಂಭವನೀಯ ಆಯ್ಕೆ ಪಟ್ಟಿಯನ್ನು ಇಂದು ಪ್ರಕಟಿಸಲಾಗಿದೆ.
ಈ ಕುರಿತಂತೆ ಬಿಎಂಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ನಿರ್ವಾಹಕ (ಉಳಿಕೆ ಮೂಲ ವೃಂದದ) ಹುದ್ದೆಗೆ ಅಭ್ಯರ್ಥಿಗಳಿಗೆ ದಿನಾಂಕ:01/09/2024 ರಂದು ನಡೆದ ಸಾಮಾನ್ಯ ಸಾಮರ್ಥ್ಯ ಪರೀಕ್ಷೆಯಲ್ಲಿ ಸರಾಸರಿ ಶೇ.30 ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ಅಂಕಗಳ ಆಧಾರದ ಮೇಲೆ ಮೂಲದಾಖಲಾತಿಗಳ ಮತ್ತು ದೇಹದಾರ್ಢ್ಯತೆ ಪರಿಶೀಲನೆಗಾಗಿ ಅರ್ಹತಾ ಪಟ್ಟಿಯನ್ನು ಉಲ್ಲೇಖ-2ರಂತೆ ಸಂಸ್ಥೆಯ ಅಧಿಕೃತ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿತ್ತು ಎಂದಿದೆ.
ಅದರಂತೆ ಮೂಲ ದಾಖಲೆ / ದೇಹದಾರ್ಢ್ಯತೆ ಪರಿಶೀಲನೆಗೆ ಹಾಜರಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳ ಪೈಕಿ ಅಧಿಸೂಚನೆಯಲ್ಲಿ ಪ್ರಕಟಿಸಲಾದ ಹುದ್ದೆಗಳಿಗೆ ಅನುಗುಣವಾಗಿ ನಿರ್ವಾಹಕ, ದರ್ಜೆ-೩ (ಮೇಲ್ವಿಚಾರಕೇತರ) ಹುದ್ದೆಯ ಸಂಭವನೀಯ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಮೀಸಲಾತಿವಾರು ಕೊನೆಯ ಅಭ್ಯರ್ಥಿಯ ಶೇಕಡವಾರು (Cut-Off) ಅಂಕಗಳು ಈ ಕೆಳಕಂಡಂತಿದೆ.
ಮೀಸಲಾತಿ | ಶೇಕಡವಾರು | ಮಹಿಳಾ | ಗ್ರಾಮೀಣ | ಕನ್ನಡ ಮಾಧ್ಯಮ | ಯೋಜನಾ ನಿರಾಶ್ರಿತ | ಸಾಮಾನ್ಯ |
ವರ್ಗ | ||||||
ಪರಿಶಿಷ್ಟ ಜಾತಿ | ಶೇಕಡ | 35.85 | 47.52 | 52.44 | 40.10 | 43.22 |
ಹುಟ್ಟಿದ ದಿನಾಂಕ | 05.05.1995 | 05.06.1998 | 15.02.1996 | 05.05.1990 | 20.02.1995 | |
ಪರಿಶಿಷ್ಟ ಪಂಗಡ | ಶೇಕಡ | 38.53 | 49.30 | 52.67 | 44.36 | 44.97 |
ಹುಟ್ಟಿದ ದಿನಾಂಕ | 05.06.2002 | 01.06.1998 | 24.05.1996 | 25.06.2000 | 02.06.1990 | |
ಪ್ರವರ್ಗ-1 | ಶೇಕಡ | 34.02 | 50.36 | 53.14 | 46.20 | 47.61 |
ಹುಟ್ಟಿದ ದಿನಾಂಕ | 10.05.1991 | 25.04.1999 | 20.05.2001 | 07.05.1995 | 28.01.1997 | |
2-ಎ | ಶೇಕಡ | 36.22 | 50.40 | 52.64 | 47.22 | 47.55 |
ಹುಟ್ಟಿದ ದಿನಾಂಕ | 01.06.2000 | 03.07.1996 | 30.05.1998 | 15.08.1998 | 06.06.2003 | |
2-ಬಿ | ಶೇಕಡ | 34.75 | 46.30 | 52.11 | 39.83 | 43.13 |
ಹುಟ್ಟಿದ ದಿನಾಂಕ | 07.06.1995 | 20.08.2003 | 01.07.2004 | 31.07.1992 | 08.07.1995 |
ಮೀಸಲಾತಿ | ಶೇಕಡವಾರು | ಮಹಿಳಾ | ಗ್ರಾಮೀಣ | ಕನ್ನಡ ಮಾಧ್ಯಮ | ಯೋಜನಾ ನಿರಾಶ್ರಿತ | ಸಾಮಾನ್ಯ |
ವರ್ಗ | ||||||
3-ಎ | ಶೇಕಡ | 36.77 | 49.51 | 53.01 | 47.17 | 45.96 |
ಹುಟ್ಟಿದ ದಿನಾಂಕ | 05.05.1995 | 08.07.1989 | 20.06.2000 | 23.02.1998 | 01.07.1991 | |
3-ಬಿ | ಶೇಕಡ | 36.51 | 50.84 | 52.98 | 48.11 | 48.63 |
ಹುಟ್ಟಿದ ದಿನಾಂಕ | 11.09.1997 | 01.06.1997 | 20.05.2000 | 23.08.2003 | 09.02.1992 | |
ಸಾಮಾನ್ಯ ವರ್ಗ | ಶೇಕಡ | 40.36 | 55.77 | 65.63 | 51.39 | 53.30 |
ಹುಟ್ಟಿದ ದಿನಾಂಕ | 22.07.1998 | 04.06.1997 | 08.04.1992 | 01.06.1999 | 19.07.2003 |
ಸಂಭವನೀಯ ಆಯ್ಕೆ ಪಟ್ಟಿಯಲ್ಲಿ ಗುಂಪುವಾರು ಹಾಗೂ ಶೇಕಡವಾರು ಅಂಕಗಳಿಗಿಂತ ಹೆಚ್ಚಿನ ಅಂಕ ಗಳಿಸಿದಾಗ್ಯೂ ಆಯ್ಕೆ ಪಟ್ಟಿಯಲ್ಲಿ ಸೇರ್ಪಡೆಗೊಳ್ಳದ ಅಭ್ಯರ್ಥಿಗಳು ಸಂಬಂಧಪಟ್ಟ ಮೂಲ ದಾಖಲಾತಿಗಳೊಂದಿಗೆ ಅಧ್ಯಕ್ಷರು, ಆಯ್ಕೆ ಸಮಿತಿ, ಬೆ.ಮ.ಸಾ.ಸಂಸ್ಥೆ, ಕೇಂದ್ರ ಕಛೇರಿ, ಶಾಂತಿನಗರ ಬೆಂಗಳೂರು-560027 ಇಲ್ಲಿ ದಿನಾಂಕ:31/01/2025 ರ ಸಂಜೆ 17:30 ಗಂಟೆ ಒಳಗಾಗಿ ಮೂಲ ದಾಖಲಾತಿಗಳೊಂದಿಗೆ ಖುದ್ದಾಗಿ ಹಾಜರಾಗಿ ಲಿಖಿತ ಆಕ್ಷೇಪಣೆ ಸಲ್ಲಿಸಬೇಕು. ದಿನಾಂಕ:31/01/2025 ರ ನಂತರ ಸಲ್ಲಿಸುವ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಎಂಬುದಾಗಿ ತಿಳಿಸಿದೆ.
BREAKING: ಕಾಂತಾರಾ-2 ಚಿತ್ರತಂಡಕ್ಕೆ ಬಿಗ್ ಶಾಕ್: ಚಿತ್ರೀಕರಣ ಸ್ಥಗಿತಕ್ಕೆ ಸಚಿವ ಈಶ್ವರ್ ಖಂಡ್ರೆ ಖಡಕ್ ಆದೇಶ
ಟ್ರಂಪ್ ಹೊಸ ಕ್ರಿಪ್ಟೋಕರೆನ್ಸಿಯ ನಂತರ ಮೆಲಾನಿಯಾ ಮೆಮೆ ನಾಣ್ಯ ಬಿಡುಗಡೆ | Melania Meme Coin
ನೀವು ‘ತೊದಲುವಿಕೆ ಸಮಸ್ಯೆ’ಯಿಂದ ಬಳಲುತ್ತಿದ್ದೀರಾ.? ಈ ಉಚಿತ ಕಾರ್ಯಾಗಾಲದಲ್ಲಿ ಭಾಗವಹಿಸಿ, ತೊಂದ್ರೆ ಕ್ಲಿಯರ್