ಬೆಳಗಾವಿ : ಬೆಳಗಾವಿಯಲ್ಲಿ ಜಾತ್ರೆಯಲ್ಲಿ ದೀಪ ಹಚ್ಚುವ ವಿಚಾರಕ್ಕೆ ಇಬ್ಬರು ಯುವಕರ ನಡುವೆ ಗಲಾಟೆ ನಡೆದಿದೆ ಈ ಗಲಾಟೆ ಬಳಿಕ ಕುಸ್ತಿ ಪೈಲ್ವಾನ್ ರೀಲ್ಸ್ ಮುಖಾಂತರ ಉರಿಸಿದ್ದಕ್ಕಾಗಿ ಕುಸ್ತಿ ಪೈಲ್ವಾನನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಸಂಬಂಧ ಇಬ್ಬರು ಬಾಲಾಪರಾಧಿಗಳು ಸೇರಿದಂತೆ ಪೊಲೀಸರು 8 ಜನ ಆರೋಪಿಗಳನ್ನ ಅರೆಸ್ಟ್ ಮಾಡಿದ್ದಾರೆ.
ಹೌದು ಬೆಳಗಾವಿಯಲ್ಲಿ ರೀಲ್ಸ್ ಮಾಡಿ ಉರಿಸಿದ ಹಿನ್ನೆಲೆಯಲ್ಲಿ ಸಿನಿಮಾ ಶೈಲಿಯಲ್ಲಿ ಸ್ಕೆಚ್ ಹಾಕಿ ಕುಸ್ತಿ ಪೈಲ್ವಾನ್ ನನ್ನು ಮರ್ಡರ್ ಮಾಡಲಾಗಿದೆ. ಜನವರಿ 15ರಂದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೊಳವಿ ಗ್ರಾಮದ ಹೊರವಲಯದಲ್ಲಿ ಈ ಒಂದು ಭೀಕರವಾದ ಕೊಲೆ ನಡೆದಿದೆ. ಕೊಳವಿ ಗ್ರಾಮದ ಪ್ರಕಾಶ್ ಹಿರಟ್ಟಿ ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ.
ಜಾತ್ರೆಯಲ್ಲಿ ದೀಪ ಹಚ್ಚುವ ವಿಚಾರಕ್ಕೆ ಪ್ರಕಾಶ್ ಹಾಗೂ ರವಿಚಂದ್ರ ಎನ್ನುವವರ ನಡುವೆ ಗಲಾಟೆ ಆಗಿದೆ. ಗಲಾಟೆಯ ಬಳಿಕ ಪ್ರಕಾಶ್ ಹಿರಟ್ಟಿ ಸಾಮಾಜಿಕ ಜಾಲತಾಣದಲ್ಲಿ ರೀಲ್ಸ್ ಹಾಕಿದ್ದ. ಬಳಿಕ ಪ್ರಕಾಶ್ ಹಿರಟ್ಟಿಯನ್ನು ಮಾರಕಸ್ತ್ರಗಳಿಂದ ಕೊಚ್ಚಿ ಪ್ರಕಾಶ್ ನನ್ನು ಕೊಲೆ ಮಾಡಲಾಗಿದೆ. ಈ ಒಂದು ಕೊಲೆ ಪ್ರಕರಣದಲ್ಲಿ ಪೊಲೀಸರು ಈಗಾಗಲೇ 8 ಜನರನ್ನು ಅರೆಸ್ಟ್ ಮಾಡಿದ್ದು, ಇದರಲ್ಲಿ ಇಬ್ಬರು ಬಾಲಾಪರಾಧಿಗಳು ಕೂಡ ಇದ್ದಾರೆ ಎಂದು ತಿಳಿದುಬಂದಿದೆ. ಗೋಕಾಕ್ ತಾಲೂಕಿನ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.