ಬಳ್ಳಾರಿ: ಜಿಲ್ಲೆಯ ಕರ್ನಾಟಕ ಹಾಲು ಉತ್ಪಾದ ಮಹಾಮಂಡಳದ ಕಚೇರಿಯ ಮುಂದೆಯೇ ವಾಮಾಚಾರ ಮಾಡಿರುವಂತ ಘಟನೆ ನಡೆದಿರುವುದಾಗಿ ತಿಳಿದು ಬಂದಿದೆ.
ಬಳ್ಳಾರಿ ನಗರದಲ್ಲಿರುವಂತ ಕೆಎಂಎಫ್ ಕಚೇರಿಯ ಮುಂದೆಯೇ ವಾಮಾಚಾರ ಮಾಡಲಾಗಿದೆ. ನಿಂಬೆಹಣ್ಣು, ಕುಡಿಕೆ, ಮಡಿಕೆ, ಕುಂಕುಮ ಇರಿಸಿ ವಾಮಾಚಾರವನ್ನು ಮಾಡಿರೋದಾಗಿ ಹೇಳಲಾಗುತ್ತಿದೆ.
ಈಗಾಗಲೇ ನಷ್ಟದಲ್ಲಿರುವಂತ ಕೆಎಂಎಫ್ ಮುಂದೆಯೇ ವಾಮಾಚಾರದಿಂದಾಗಿ ಕಚೇರಿಯ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಬಳ್ಳಾರಿಯ ಕೆಎಂಎಫ್ ನಲ್ಲಿನ ಆಂತರಿಕ ವೈಮನಸ್ಸಿನಿಂದಲೇ ಈ ಕೃತ್ಯ ಎಸಗಿರೋದಾಗಿ ಹೇಳಲಾಗುತ್ತಿದೆ.
ಮಡಿಕೆ, ತಾಯತ, 8 ನಿಂಬೆಹಣ್ಣು, ಕುಂಬಳಕಾಯಿಗೆ ಬಣ್ಣದ ದಾರ ಕಟ್ಟಿರುವಂತ ದುಷ್ಕರ್ಮಿಗಳು ವಾಮಾಚಾರ ಮಾಡಿರೋದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
ಮುಡಾ ಕುರಿತು ಇಡಿಯವರ ಪತ್ರಿಕಾ ಪ್ರಕಟಣೆ ರಾಜಕೀಯ ಪ್ರೇರಿತ: ಮುಖ್ಯಮಂತ್ರಿ ಸಿದ್ದರಾಮಯ್ಯ
ಟ್ರಂಪ್ ಹೊಸ ಕ್ರಿಪ್ಟೋಕರೆನ್ಸಿಯ ನಂತರ ಮೆಲಾನಿಯಾ ಮೆಮೆ ನಾಣ್ಯ ಬಿಡುಗಡೆ | Melania Meme Coin