ವಿಜಯಪುರ : ವಿಜಯಪುರ ಸಿಂದಗಿ ರಸ್ತೆಯಲ್ಲಿರುವ ಇಟ್ಟಂಗಿ ಭಟ್ಟಿಯಲ್ಲಿ ಇಂದು ಮಾಲೀಕನೊಬ್ಬ ಅಡ್ವಾನ್ಸ್ ಹಣ ಪಡೆದು ಕೆಲಸಕ್ಕೆ ತಡವಾಗಿ ಬಂದಿದ್ದಕ್ಕೆ ಕೋಪಗೊಂಡು ಇಬ್ಬರು ಕಾರ್ಮಿಕರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ವಿಜಯಪುರ ಸಿಂದಗಿ ರಸ್ತೆಯಲ್ಲಿರುವಂತಹ ಇಟ್ಟಂಗಿ ಭಟ್ಟಿಯ ಮಾಲೀಕ ಖೇಮು ರಾಠೋಡ್ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ನಿವಾಸಿಗಳಾದಂತಹ ಸದಾಶಿವ ಹಾಗೂ ಉಮೇಶ್ ಮಾದರ್ ಎನ್ನುವ ಕಾರ್ಮಿಕರಿಗೆ ಅಲ್ಲೇ ಇದ್ದಂತಹ ಪ್ಲಾಸ್ಟಿಕ್ ಪೈಪ್ ಗಳಿಂದ ಅಂಗಾಲಿಗೆ ಭೀಕರವಾಗಿ ಹಲ್ಲೆ ನಡೆಸಿದ್ದ. ಸದಾಶಿವ ಹಾಗೂ ಉಮೇಶ್ ನಮ್ಮನ್ನು ಬಿಟ್ಟು ಬಿಡಿ ಎಂದು ಎಷ್ಟೇ ಗೊಗರೆದರೂ ಕೂಡ ಕನಿಕರವಿಲ್ಲದೆ ಖೇಮು ರಾಠೋಡ್ ಹಲ್ಲೆ ನಡೆಸಿದ್ದ.
ಇದೀಗ ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ವಿಜಯಪುರ ಗ್ರಾಮೀಣ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಘಟನೆಯ ಕುರಿತು ಮಾಹಿತಿ ಪಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಈ ಒಂದು ಘಟನೆಯಲ್ಲಿ ಯಾರನ್ನು ಕೂಡ ಬಿಡಲ್ಲ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.