ಕೋಲಾರ : ಸದ್ಯ ರಾಜ್ಯ ರಾಜಕಾರಣದಲ್ಲಿ ಅದರಲ್ಲೂ ಕಾಂಗ್ರೆಸ್ ಪಾಳಯದಲ್ಲಿ ಸಿಎಂ ಬದ್ಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಕುರಿತು ಚರ್ಚೆ ಜೋರಾಗಿ ನಡೆದಿದೆ ಇದರ ಮಧ್ಯ ನಗರ ಅಭಿವೃದ್ಧಿ ಸಚಿವ ಭಾರತಿ ಸುರೇಶ್ ಅವರು, ಸಿಎಂ ಹಾಗೂ ಕೆಪಿಸಿಸಿ ಎರಡು ಸ್ಥಾನಗಳು ಯಾವುದೇ ಕಾರಣಕ್ಕೂ ಬದಲಾಗಲ್ಲ ಎಂದು ತಿಳಿಸಿದರು.
ಕೋಲಾರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರದಲ್ಲಿ ಯಾವ ಪವರ್ ಶೇರಿಂಗ್ ಇಲ್ಲ ಕೇರಿಂಗು ಇಲ್ಲ. ಸಿಎಂ ಸ್ಥಾನ ಕೆಪಿಸಿಸಿ ಅಧ್ಯಕ್ಷ ಸ್ಥಾನ ಎರಡೂ ಬದಲಾಗುವುದಿಲ್ಲ.ಈ ಎರಡು ಹುದ್ದೆಯ ಬದಲಾವಣೆಯಿಂದ ಹೈ ಕಮಾಂಡ್ ನಿಂದ ಮಾತ್ರ ಸಾಧ್ಯ. ಕೈಮೀರಿ ಅಭಿವೃದ್ಧಿ ಮಾಡಲು ನಾವೆಲ್ಲರೂ ಪ್ರಯತ್ನ ಮಾಡುತ್ತಿದ್ದೇವೆ. ಪ್ರತ್ಯೇಕ ಸಭೆ ಮಾಡದಂತೆ ಈಗಾಗಲೇ ನಮ್ಮ ಹೈಕಮಾಂಡ್ ಸೂಚನೆ ಕೊಟ್ಟಿದೆ. ಒಬ್ಬರಿಗೆ ಒಂದೇ ಹುದ್ದೆ ಎಂಬ ವಿಚಾರಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಕೋಲಾರದಲ್ಲಿ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದರು.
ಕೋಲಾರದಲ್ಲಿ ನಾಲ್ವರು ಸಚಿವ ಸ್ಥಾನದ ಆಕಾಂಕ್ಷಿಗಳಿದ್ದಾರೆ ಎಂಬ ವಿಚಾರವಾಗಿ ನಾಲ್ಕಲ್ಲ 6 ಜನ ಇರಲಿ ಆದರೆ ಆ ಕುರಿತು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೋಲಾರ ಉಸ್ತುವಾರಿ ಆದಮೇಲೆ ಹೆಚ್ಚುವರಿ ಭೇಟಿ ನೀಡಿದ್ದೇನೆ.ರಾಜ್ಯದ ಅನುದಾನದಲ್ಲಿ ರಿಂಗ್ ರೋಡ್ ನಿರ್ಮಾಣ ಮಾಡುತ್ತೇವೆ. ಕೋಲಾರಕ್ಕೆ ಮೆಡಿಕಲ್ ಕಾಲೇಜ್ ಘೋಷಿಸಲು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುತ್ತದೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹೇಳಿಕೆ ನೀಡಿದರು.