ಬೆಳಗಾವಿ : ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರನ್ನು ಬದಲಾಯಿಸಿ ಎಂದು ರಾಜ್ಯದ ಕೆಲ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿ ಅವರಿಗೆ ದೂರು ನೀಡುವ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಇದೀಗ ಸ್ಪಷ್ಟನೆ ನೀಡಿದ್ದು, ಅದೆಲ್ಲಾ ಸುಳ್ಳು ಎಂದು ಬೆಳಗಾವಿಯಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುರ್ಜೆವಾಲ ವಿರುದ್ಧ ಹಲವು ನಾಯಕರು ದೂರು ನೀಡಿರುವ ವಿಚಾರವಾಗಿ, ಅದೆಲ್ಲ ನಿಮಗೆ ಯಾರು ಹೇಳಿದ್ದು? ನಿಮಗೆ ಸುಳ್ಳು ಹೇಳಿ ನಿಮ್ಮ ಇಮೇಜ್ ಹಾಳು ಮಾಡುತ್ತಿದ್ದಾರೆ. ನಿನ್ನೆ ಫಿರೋಜ್ ಸೇಠ್ ಮನೆಗೆ ಹೋದರೆ ನೀವೆಲ್ಲ ನಿಮ್ಮದೇ ಸ್ಟೋರಿ ಬಿಲ್ಡ್ ಮಾಡಿದ್ದೀರಿ ಎಂದು ತಿಳಿಸಿದರು.
ಫಿರೋಜ್ ಸೇಠ್ ನಮ್ಮ ಜೊತೆ ಎರಡು ಸಾರಿ ಎಂಎಲ್ಎ ಆಗಿ ಕೆಲಸ ಮಾಡಿದ್ದಾರೆ, ಒಳ್ಳೆ ಹಿರಿಯ ನಾಯಕರಾಗಿದ್ದಾರೆ. ಸಂಘಟನೆಯ ದೃಷ್ಟಿಯಿಂದ ನಾನು ಮತ್ತು ಜಿಲ್ಲಾಧ್ಯಕ್ಷರು ಹೋಗಿ ಭೇಟಿ ಮಾಡಿ ಚರ್ಚಿಸಿದ್ದೇವೆ. ಅದನ್ನೇ ನೀವು ಬೇರೆ ರೀತಿಯಲ್ಲಿ ಬಿಲ್ಡ್ ಮಾಡಿ ಸ್ಟೋರಿ ಮಾಡಿದ್ದೀರಾ ಎಂದು ಮಾಧ್ಯಮಗಳಿಗೆ ತಿಳಿಸಿದರು.