ವಿಜಯಪುರ : ವಿಜಯಪುರದಲ್ಲಿ ಅಮಾನವೀಯ ಘಟನೆ ನಡೆದಿದ್ದು ಕೂಲಿ ಕಾರ್ಮಿಕರನ್ನು ಮಾಲೀಕನೊಬ್ಬ ಹಿಗ್ಗಾಮುಗ್ಗ ಥಳಿಸಿರುವ ಘಟನೆ ನಡೆದಿದೆ. ಇಟ್ಟಂಗಿ ಭಟ್ಟಿ ಮಾಲೀಕ ಈ ಒಂದು ರಾಕ್ಷಸಿಯ ಕೃತ್ಯ ಎಸಗಿದ್ದಾನೆ. ಮಾಲಿಕ ಖೇಮು ರಾಠೋಡ್ ಎಂಬಾತ ಕಾರ್ಮಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ.
ಹೌದು ವಿಜಯಪುರ ಸಿಂದಗಿ ರಸ್ತೆಯಲ್ಲಿರುವ ಇಟ್ಟಂಗಿ ಬಟ್ಟೆಯಲ್ಲಿ ಈ ಒಂದು ಅಮಾನವೀಯ ಘಟನೆ ನಡೆದಿದೆ. ಸದಾಶಿವ ಹಾಗೂ ಉಮೇಶ್ ಮಾದರ್ ಎನ್ನುವ ಕಾರ್ಮಿಕರ ಮೇಲೆ ಮಾಲೀಕ ಹಲ್ಲೆ ಖೇಮು ನಡೆಸಿದ್ದಾನೆ. ಸಂಕ್ರಾಂತಿ ಹಬ್ಬಕ್ಕೆ ಊರಿಗೆ ಹೋಗಿ ವಾಪಸ್ ಬರುವುದು ಸ್ವಲ್ಪ ತಡವಾಗಿತ್ತು. ಅಡ್ವಾನ್ಸ್ ಹಣ ಪಡೆದು ಕೆಲಸಕ್ಕೆ ಬಂದಿಲ್ಲ ಎಂದು ಇಟ್ಟಂಗಿ ಭಟ್ಟಿಯ ಮಾಲೀಕ ಹಲ್ಲೆ ಮಾಡಿದ್ದಾನೆ.
ಭಟ್ಟಿಯಲ್ಲಿದ್ದ ಪೈಪ್ ಗಳಿಂದ ಮಾಲೀಕ ಮನಬಂದಂತೆ ಹಲ್ಲೆ ನಡೆಸಿದ್ದಾನೆ. ವಿಜಯಪುರ ನಗರದ ಸಿಂದಿಗೆ ರಸ್ತೆಯಲ್ಲಿರುವ ಇಟ್ಟಂಗಿ ಬಟ್ಟೆಯಲ್ಲಿ ಈ ಒಂದು ಘಟನೆ ನಡೆದಿದೆ. ಕಾರ್ಮಿಕರಾದಂತಹ ಸದಾಶಿವ ಹಾಗೂ ಉಮೇಶ್ ನನ್ನು ಕೆಳಗೆ ಕೂಡಿಸಿ ಅಂಗಾಲಿಗೆ ಇಬ್ಬರು ವ್ಯಕ್ತಿಗಳು ಫೈಬರ್ ಪೈಪ್ ನಿಂದ ಭೀಕರವಾಗಿ ಹಲ್ಲೆ ನಡೆಸಿದ್ದಾರೆ. ಹಲ್ಲೆಗೆ ಒಳಗಾದವರು ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಚಿಕ್ಕಲಕಿ ಗ್ರಾಮದ ನಿವಾಸಿಗಳು ಎಂದು ತಿಳಿದುಬಂದಿದೆ. ಕಾರ್ಮಿಕರು ಎಷ್ಟೇ ಬೇಡಿಕೊಂಡರು ಕೂಡ ಖೇಮು ರಾಠೋಡ್ ಹಲ್ಲೆ ನಡೆಸಿದ್ದಾನೆ.
ಕಾರ್ಮಿಕರು ಬಾಯಿ ಬಡೆದುಕೊಳ್ಳುತ್ತಿರುವ ದೃಶ್ಯ ನಿಜಕ್ಕೂ ಮನಕಲಕುವಂತಿದೆ. ಎಷ್ಟೇ ಬಾಯಿ ಬಡೆದುಕೊಂಡರು ಮಾಲೀಕನಿಗೆ ಕನಿಕರ ಬಾರದೆ ಮತ್ತೆ ಹಲ್ಲೆ ನಡೆಸಲಾಗಿದೆ ಈ ಕುರಿತು ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಘಟನೆ ಕುರಿತು ಮಾಹಿತಿ ಪಡೆದುಕೊಂಡು ಮಾಲೀಕನ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.