ಹಾಸನ : ಇತ್ತೀಚಿಗೆ ಆನ್ಲೈನ್ ಗೇಮ್ ಎನ್ನುವ ಗಿಳಿಗೆ ಬಿದ್ದು ಯುವ ಜನತೆ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡು ಕೊನೆಗೆ ಮಾನಸಿಕವಾಗಿ ಇನ್ನೊಂದು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.
ಹೌದು ಬೇಲೂರಿನ ಲಾಡ್ಜ್ ನಲ್ಲಿ ರಾಕೇಶ್ ಗೌಡ ಎನ್ನುವ ಯುವಕ ಸೂಸೈಡ್ ಮಾಡಿಕೊಂಡಿದ್ದಾನೆ. ಚೀಕನಹಳ್ಳಿ ಮೂಲದ ಉಮೇಶ್ ಎಂಬುವರ ಪತ್ರ ರಾಕೇಶ್ ಗೌಡ ಎಂದು ತಿಳಿದು ಬಂದಿದೆ. ರಾಕೇಶ್ ಸ್ಪಂದನ ಸ್ಪೂರ್ತಿ ಫೈನಾನ್ಸ್ ನಲ್ಲಿ ಮೃತ ರಾಕೇಶ್ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಸಾವಿಗೂ ಮುನ್ನವೇ ರಾಕೇಶ್ ಗೌಡ ಡೆತ್ ನೋಟ್ ಕೂಡ ಬರೆದಿದ್ದಾನೆ ಎಂದು ತಿಳಿದುಬಂದಿದೆ. ಮೃತ ರಾಕೇಶ್ ಕರ್ನಾಟಕ ರಕ್ಷಣಾ ವೇದಿಕೆ ನಗರ ಘಟಕದ ಅಧ್ಯಕ್ಷನಾಗಿದ್ದ ಎನ್ನಲಾಗಿದೆ.
ಡೆತ್ ನೋಟ್ ನಲ್ಲಿ ಏನಿದೆ?
ಆನ್ಲೈನ್ ಗೆ ನನ್ನ ಜೀವ ತೆಗೆದು ಬಿಡ್ತು. ಸಾಲ ತೀರಿಸಲಾಗಿದೆ ಈ ನಿರ್ಧಾರ ಮಾಡಿದ್ದೇನೆ. ಎರಡು ವರ್ಷದಿಂದ ಆನ್ಲೈನ್ ಗೆ ಮಾಡಿ ಸಾಲ ಮಾಡಿಕೊಂಡಿದೆ.ನನ್ನ ಸಾವಿಗೆ ನಾನೇ ಕಾರಣ ಅಮ್ಮ ನನ್ನನ್ನು ಕ್ಷಮಿಸಿ ಬಿಡು. ಫೈನಾನ್ಸ್ ಅಲ್ಲಿ ಒಂದು ಲಕ್ಷ ಹಣ ದುರುಪಯೋಗ ಪಡಿಸಿಕೊಂಡಿದ್ದೇನೆ.ನನ್ನ ಸಾವಿನ ಸುದ್ದಿ ನೇರವಾಗಿ ನನ್ನ ತಾಯಿಗೆ ಹೇಳಬೇಡಿ.ನನ್ನ ಶವವನ್ನು ಚೀಕನಹಳ್ಳಿ ಗ್ರಾಮಕ್ಕೆ ತೆಗೆದುಕೊಂಡು ಹೋಗಬೇಡಿ. ಬೇಲೂರು ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನಡೆಯಲಿ ಎಂದು ಡೆತ್ ನೋಟಲ್ಲಿ ಬರೆದಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.