ವಾಷಿಂಗ್ಟನ್ : ಇಂದಿನಿಂದ ಅಮೆರಿಕದಲ್ಲಿ ಮತ್ತೆ ಡೊನಾಲ್ಡ್ ಟ್ರಂಪ್ ಯುಗ ಆರಂಭವಾಗಲಿದೆ. ಇಂದು ಅಮೆರಿಕದ 47 ನೇ ಅಧ್ಯಕ್ಷರಾಗಿ ಟ್ರಂಪ್ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇಂದು ರಾತ್ರಿ 10.30 ಕ್ಕೆ ಡೊನಾಲ್ಟ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಟ್ರಂಪ್ ಗೆ ಪ್ರಮಾಣವಚನ ಬೋಧಿಸಲಿದ್ದಾರೆ.
ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಮಾರಂಭದಲ್ಲಿ ಟೆಕ್ ಸಿಇಒಗಳಾದ ಎಲೋನ್ ಮಸ್ಕ್, ಜೆಫ್ ಬೆಜೋಸ್ ಮತ್ತು ಮಾರ್ಕ್ ಜುಕರ್ಬರ್ಗ್ ಭಾಗವಹಿಸಲಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಟೆಸ್ಲಾ, ಅಮೆಜಾನ್ ಮತ್ತು ಮೆಟಾ ಸಿಇಒಗಳು ಟ್ರಂಪ್ ಅವರ ಕ್ಯಾಬಿನೆಟ್ ನಾಮನಿರ್ದೇಶಿತರು ಮತ್ತು ಇತರ ಚುನಾಯಿತ ಅಧಿಕಾರಿಗಳೊಂದಿಗೆ ಕುಳಿತುಕೊಳ್ಳಲಿದ್ದಾರೆ ಎಂದು ಎನ್ಬಿಸಿ ನ್ಯೂಸ್ ವರದಿ ಮಾಡಿದೆ.
ಬೆಜೋಸ್ ಅವರ ಅಮೆಜಾನ್ ಮತ್ತು ಜುಕರ್ಬರ್ಗ್ ಅವರ ಮೆಟಾ ಎರಡೂ ಟ್ರಂಪ್ ಪದಗ್ರಹಣಕ್ಕೆ ತಲಾ 1 ಮಿಲಿಯನ್ ಡಾಲರ್ ಕೊಡುಗೆ ನೀಡಿವೆ. ಟೆಸ್ಲಾ, ಸ್ಪೇಸ್ಎಕ್ಸ್ ಮತ್ತು ಎಕ್ಸ್ ಮುಖ್ಯಸ್ಥರಾಗಿರುವ ಮಸ್ಕ್, ನವೆಂಬರ್ನಲ್ಲಿ ಟ್ರಂಪ್ ಅವರ ಆಯ್ಕೆಯನ್ನು ಬೆಂಬಲಿಸಲು ಕಾಲು ಬಿಲಿಯನ್ ಡಾಲರ್ಗಳನ್ನು ಖರ್ಚು ಮಾಡಿದ್ದಾರೆ ಎಂದು ವರದಿಯಾಗಿದೆ