ಶಿವಮೊಗ್ಗ: ಕೆಲ ದಿನಗಳ ಹಿಂದೆ ಜಿಲ್ಲೆಯ ಸಾಗರ ತಾಲ್ಲೂಕಿನ ಮಾದಾಪುರ ಗ್ರಾಮದಲ್ಲಿ ಆನೆ ದಾಳಿ ನಡೆಸಿ, ಬೆಳೆ ಹಾನಿಗೊಳಿಸಿತ್ತು. ಈ ಸ್ಥಳಕ್ಕೆ ಸಾಗರ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಭೇಟಿ ನೀಡಿ, ಪರಿಶೀಲಿಸಿದರು.
ಇಂದು ಸಾಗರ ಶಾಸಕಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಗೋಪಾಲಕೃಷ್ಣ ಬೇಳೂರು ಅವರು ಮಾದಾಪುರದಲ್ಲಿ ಆನೆ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಇನ್ನೂ ಆನೆ ದಾಳಿಯಿಂದ ಬೆಳೆಹಾನಿಗೊಂಡಿದ್ದಂತ ರೈತನಿಗೆ ಧೈರ್ಯ ತುಂಬಿದಂತ ಅವರು, ಬೆಳೆಹಾನಿಗೆ ಸರ್ಕಾರದಿಂದ ಪರಿಹಾರ ಕೊಡಿಸುವಂತ ಭರವಸೆಯನ್ನು ನೀಡಿದರು. ಜೊತೆಗೆ ಆನೆ ದಾಳಿಯಿಂದ ಬೆಳೆ ನಷ್ಟ ಹೊಂದಿದಂತ ರೈತರಿಗೆ ವೈಯಕ್ತಿಕವಾಗಿ ಧನ ಸಹಾಯವನ್ನು ಮಾಡಿದರು.
ಇದೇ ಸಂದರ್ಭದಲ್ಲಿ ಸ್ಥಳದಲ್ಲಿದ್ದಂತ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಆನೆಗಳ ದಾಳಿಯಿಂದ ರೈತರ ಜಮೀನು, ತೋಟಗಳಿಗೆ ಹಾನಿಯಾಗದಂತೆ ಸೂಕ್ತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
BREAKING : ಡಿಸಿಎಂ ಡಿಕೆ ಶಿವಕುಮಾರ್ ನೆಕ್ಸ್ಟ್ ‘CM’ ಅಗಲಿ ಎಂದು ‘ತ್ರಿಶೂಲ’ ನೀಡಿ ಆಶೀರ್ವದಿಸಿದ ಅರ್ಚಕರು!