ಬೆಳಗಾವಿ : ಸಿಎಂ ಸಿದ್ದರಾಮಯ್ಯ ಕುರಿತು ನಾಜಿಯಾ ಖಾನ್ ಇದೀಗ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದಾರೆ. ಮಹಿಳೆಯರ ಜೊತೆ ಸಿಎಂ ಸಿದ್ದರಾಮಯ್ಯ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ಈ ಒಂದು ಹೇಳಿಕೆ ನೀಡಿದ್ದಾರೆ.
ಸಿಎಂ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರಿಗೆ ಮುತ್ತು ನೀಡುತ್ತಾರೆ. ಸಿದ್ದರಾಮಯ್ಯ ನಡೆಯ ಬಗ್ಗೆ ನಾನು ವಿರೋಧಿಸಿದ್ದೇನೆ. ಪಕ್ಷದ ಮಹಿಳಾ ವಕ್ತಾರೆಯರಿಗೆ ಸಿದ್ದರಾಮಯ್ಯನವರು ಮತ್ತು ನೀಡುತ್ತಾರೆ.ಚಲನಚಿತ್ರ ನಟಿಯರನ್ನು ಕೂಡ ಬಿಡದೆ ಸಿಎಂ ಸಿದ್ದರಾಮಯ್ಯ ಅಪ್ಪಿಕೊಳ್ಳುತ್ತಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಂದುವರೆದು ಮಹಿಳಾ ಪತ್ರಕರ್ತೆಯರ ಜೊತೆಗೂ ಸಿಎಂ ಅಸಭ್ಯವಾಗಿ ವರ್ತಿಸಲು ಯತ್ನಿಸಿದ್ದಾರೆ. ನನ್ನ ಬಳಿ ನೊಂದ ಮಹಿಳಾ ಪತ್ರಕರ್ತೆಯರಲ್ಲಿ ಲಿಸ್ಟ್ ಕೂಡ ಇದೆ ಎಂದು ಬೆಳಗಾವಿ ತಾಲೂಕಿನ ಸುಳೇಬಾವಿ ಗ್ರಾಮದಲ್ಲಿ ಸಿಎಂ ಸಿದ್ದರಾಮಯ್ಯ ಕುರಿತು ನಾಜಿಯಾ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.