ಬೆಳಗಾವಿ : ತನ್ನ ಪತಿ ಪರಸ್ತ್ರೀ ಜೊತೆಗೆ ಓಡಿ ಹೋಗಿದ್ದಾನೆ. ಹಾಗಾಗಿ ಆತನನ್ನು ಹುಡುಕಿ ಕೊಡುವಂತೆ ಗ್ರಾಮ ಪಂಚಾಯಿತಿ ಸದಸ್ಯೆಯೊಬ್ಬರು ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತಿರುವ ಘಟನೆ ಬೆಳಗಾವಿ ತಾಲೂಕಿನ ಮಾರಿಹಾಳ ಎಂಬ ಗ್ರಾಮದಲ್ಲಿ ನಡೆದಿದೆ.
ಹೌದು ಪರಸ್ತ್ರಿ ಜೊತೆಗೆ ಪತಿ ಪರಾರಿಯಾಗಿದ್ದಾನೆ. ಕೂಡಲೇ ನನ್ನ ಪತಿಯನ್ನು ಹುಡುಕಿ ಕೊಡಿ ಎಂದು ಠಾಣೆಯ ಮುಂದೆ ಗ್ರಾ.ಪಂ ಸದಸ್ಯೆ ವಾಣಿಶ್ರೀ ಪ್ರತಿಭಟನೆ ನಡೆಸುತ್ತಿದ್ದಾರೆ. ಬೆಳಗಾವಿ ತಾಲೂಕಿನ ಮಾರಿಹಾಳ ಠಾಣೆ ಎದರು ವಾಣಿಶ್ರೀ ಧರಣಿ ನಡೆಸುತ್ತಿದ್ದಾರೆ. 25 ದಿನಗಳ ಹಿಂದೆ ಪತಿ ಪರಸ್ತ್ರೀ ಜೊತೆಗೆ ಒಡಿ ಹೋಗಿದ್ದಾನೆ, ಮಾಸಾಬಿ ಎಂಬ ವಿವಾಹಿತ ಜೊತೆಗೆ ಬಸವರಾಜ್ ಓಡಿ ಹೋಗಿದ್ದಾನೆ ಎಂದು ಆರೋಪಿಸುತ್ತಿದ್ದು ಮಾರಿಹಾಳ ಠಾಣೆಗೆ ದೂರು ನೀಡಲು ಬಂದರೂ ಸಹ ಪೊಲೀಸರು ಸ್ಪಂದಿಸುತ್ತಿಲ್ಲ ಪೊಲೀಸರು ಸುಳ್ಳು ಹೇಳುತ್ತಿದ್ದಾರೆ ಎಂದು ವಾಣಿಶ್ರೀ ಆರೋಪಿಸಿದ್ದಾರೆ.
ನನ್ನ ಮಕ್ಕಳು ಕೂಡ ಕರೆದುಕೊಂಡು ಹೋಗಿದ್ದಾನೆ. ಆಕೆ ನನ್ನ ಮಕ್ಕಳನ್ನು ನೋಡಿಕೊಳ್ಳುತ್ತೇನೆ ಎಂದು ಕರೆ ಮಾಡಿ ಹೇಳುತ್ತಾಳೆ. ಹಾಗಾಗಿ ಅವಳು ಆಕೆ ಗಂಡನ ಮನೆಗೆ ಹೋಗಬೇಕು. ನನಗೆ ನನ್ನ ಗಂಡ ಸಿಗಬೇಕು ಇವತ್ತು ನನ್ನ ಗಂಡ ನನ್ನು ಓಡಿಸಿಕೊಂಡು ಹೋಗಿದ್ದಾಳೆ ನಾಳೆ ಇನ್ಯಾರನ್ನೋ ಓಡಿಸಿಕೊಂಡು ಹೋಗುತ್ತಾಳೆ ಇದೇ ರೀತಿ ಮುಂದುವರೆದರೆ ಸಾಕಷ್ಟು ಸಂಸಾರಗಳು ಹಾಳಾಗುತ್ತವೆ ಎಂದು ವಾಣಿಶ್ರೀ, ಧರಣಿ ನಡೆಸಿದ್ದಾರೆ.
ಇನ್ನು ವಾಣಿಶ್ರೀ ಗಂಡ ಬಸವರಾಜನ ಜೊತೆ ಓಡಿ ಹೋಗಿದ್ದ ಮಾಸಾಬಿ, ಬಸವರಾಜ್ ನನ್ನು ಕರೆದುಕೊಂಡು ನಾನೇ ಹೋಗಿದ್ದೇನೆ. ನನ್ನ ಗಂಡನಿಗೆ ಬೇರೆಯವರ ಜೊತೆ ಅಕ್ರಮ ಸಂಬಂಧ ಇತ್ತು. ಹಾಗಾಗಿ ನಾನು ಬಸವರಾಜನನ್ನು ನಾನೇ ಕರೆದುಕೊಂಡು ಹೋಗಿದ್ದೇನೆ. ನನ್ನ ಗಂಡ ನನ್ನ ಹೆಸರು ಹಾಳು ಮಾಡಿದ್ದಾನೆ. ಒಂದು ವೇಳೆ ಓಡಿ ಹೋಗಬೇಕಾದರೆ ನಾನು 9 ವರ್ಷಗಳ ಹಿಂದೇನೆ ಓಡಿಹೋಗುತ್ತಿದ್ದೆ.
ನನ್ನ ಗಂಡನ ಜೊತೆಗೆ ಇರುವ ಅವಶ್ಯಕತೆ ಇರಲಿಲ್ಲ. ಹೊರಗಡೆ 4-5 ಮಹಿಳೆಯರ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾನೆ. ಆದರೂ ಕೂಡ ನಾನು ಅವನ ಜೊತೆ ಸಂಸಾರ ಮಾಡಿದ್ದು, ಹಿರಿಯರ ಸಮ್ಮುಖದಲ್ಲಿ ರಾಜಿ ಸಾಧನ ಮಾಡಸಲಾಗಿತ್ತು.ಆದರೂ ಕೂಡ ನನ್ನ ಗಂಡ ಅದೇ ಚಟ ಮುಂದುವರಿಸಿದ್ದ ಹೀಗಾಗಿ ಬಸವರಾಜನನ್ನು ನಾನೇ ಕರೆದುಕೊಂಡು ಹೋಗಿದ್ದೇನೆ ಎಂದು ಮಾಸಾಬಿ ತಿಳಿಸಿದ್ದಾಳೆ.