ಬೆಂಗಳೂರು: ನಗರದಲ್ಲಿ ತಾನು ಕಳೆದ ಬಾಲ್ಯದ ದಿನಗಳನ್ನು, ಶಾಲಾ ಕಾಲೇಜಿನ ಜೀವನನ್ನು ನಟ ರಜನಿಕಾಂತ್ ನೆನಪು ಮಾಡಿಕೊಂಡಿದ್ದಾರೆ. ಎಪಿಎಸ್ ಕಾಲೇಜಿನಲ್ಲಿ ಓದಿದಂತ ಶಾಲಾ ದಿನಗಳನ್ನು ನೆನಪಿಸಿಕೊಂಡು ವೀಡಿಯೋ ಮಾಡಿ ತಿಳಿಸಿದ್ದಾರೆ.
ಈ ಬಗ್ಗೆ ಬ್ಯಾಂಕಾಂಕ್ ನಿಂದ ವೀಡಿಯೋ ಬಿಡುಗಡೆ ಮಾಡಿರುವಂತ ಅವರು, ಎಪಿಎಸ್ ಅಲ್ಯೂಮಿನಿಯ ವೇಳೆಯಲ್ಲಿ ನಾನು ಇರಬೇಕಿತ್ತು. ಆದರೇ ಇಲ್ಲಿ ಶೂಟಿಂಗ್ ಗೆ ಬಂದಿರುವ ಕಾರಣ, ಭಾಗಿಯಾಗೋದಕ್ಕೆ ಸಾಧ್ಯವಾಗಿಲ್ಲ ಅಂತ ವೀಡಿಯೋದಲ್ಲಿ ತಿಳಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ. ಎಪಿಎಸ್ ಹೈಸ್ಕೋಲ್ ನಲ್ಲಿ ಓದಿದೆ ಎನ್ನುವುದೇ ನನಗೆ ಹೆಮ್ಮೆ. ಗಂಗಾಧರೇಶ್ವರ ದೇವಸ್ಥಾನದ ಬಳಿಯಲ್ಲಿ ಪ್ರಾಥಮಿಕ ಶಾಲೆಯನ್ನು ಓದಿದ್ದು. ನಾನೇ ಕ್ಲಾಸಿಗೆ ಫಸ್ಟ್. ಮಾನಿಟರ್ ಕೂಡ ಆಗಿದ್ದೆ. ಪ್ರಾಥಮಿಕ ಶಾಲೆಯಲ್ಲೇ ಶೇ.98 ತೆಗೆದಿದ್ದೆ. ನಮ್ಮ ಅಣ್ಣ ನನ್ನು ಪ್ರೌಢ ಶಾಲೆಗೆ ಇಂಗ್ಲೀಷ್ ಮೀಡಿಯಂಗೆ ಹಾಕಿದರು. ನನಗೆ ಆಗ ಕಷ್ಟ ಆಗಿತ್ತು. 8, 9 ಹೇಗೋ ಪಾಸ್ಟ್ ಮಾಡಿದೆ. ಆದರೇ ಎಸ್ ಎಸ್ ಎಲ್ ಸಿಯಲ್ಲಿ ಫೇಲ್ ಆದೆ ಎಂದರು.
ಕೆಮಿಸ್ಟ್ರಿ ಮಿಸ್ ಒಬ್ಬರು ನನಗೆ ಮನೆಗೆ ಬಂದು ವಿಶೇಷ ಕಾಳಜಿಯಿಂದ ಪಾಠ ಹೇಳಿಕೊಡುತ್ತಿದ್ದರು. ಆ ನಂತ್ರ ಕೆಮಿಸ್ಟ್ರಿಯನ್ನು ಪಾಸ್ ಮಾಡಿದೆ. ಆ ಬಳಿಕ ಎಪಿಎಸ್ ಶಾಲೆಯನ್ನು ಸೇರಿದೆ. ಇದೇ ಶಾಲೆಯಲ್ಲಿ ಇಂಟರ್ ಡ್ರಾಮಾ ಕಾಂಪ್ಯೂಟೇಷನ್ ನಡೆಯುತ್ತಿತ್ತು. ಆಗ ನಾನು ಕಥೆ ಹೇಳುತ್ತಿದ್ದೆ. ಅದು ಶಿಕ್ಷಕರಿಗೆ ಗೊತ್ತಾಗಿ ನನ್ನ ಡ್ರಾಮಾ ಮಾಡೋದಕ್ಕೆ ಒತ್ತಾಯಿಸಿದರು. ನಾನು ಆದಿಶಂಕರ ಡ್ರಾಮಾ ಮಾಡಿದೆ. ಅದರಲ್ಲಿನ ಅಭಿನಯಕ್ಕೆ ಎಲ್ಲರೂ ಬೆನ್ನು ತಟ್ಟಿದರು. ನಮ್ಮ ಶಾಲೆಗೆ ಡ್ರಾಮಾ ಕಾಂಪ್ಯೂಟೇಶನ್ ನಲ್ಲಿ ಪ್ರೈಸ್ ಕೂಡ ಬಂತು. ಅಲ್ಲಿ ನನಗೆ ಬೆಸ್ಟ್ ಆಕ್ಟರ್ ಪ್ರಶಸ್ತಿಯನ್ನು ಕೂಡ ಬಂದಿತ್ತು ಎಂದಿದ್ದಾರೆ. ಆ ವೀಡಿಯೋ ಈ ಕೆಳಗಿನ ಲಿಂಕ್ ನಲ್ಲಿದೆ ತಪ್ಪದೇ ನೋಡಿ.
BREAKING: ಬುಲೆರೋ, ಬೈಕ್ ನಡುವೆ ಭೀಕರ ಅಪಘಾತ: ಡಿಕ್ಕಿ ರಬಸಕ್ಕೆ ದೇಹದಿಂದಲೇ ಬೇರ್ಪಟ್ಟ ರುಂಡ
BREAKING: ಬುಲೆರೋ, ಬೈಕ್ ನಡುವೆ ಭೀಕರ ಅಪಘಾತ: ಡಿಕ್ಕಿ ರಬಸಕ್ಕೆ ದೇಹದಿಂದಲೇ ಬೇರ್ಪಟ್ಟ ರುಂಡ