ಬೆಂಗಳೂರು: ನಗರದಲ್ಲಿ ಫೆಬ್ರವರಿ.1ರಿಂದ 17ರವರೆಗೆ ಏರೋ ಇಂಡಿಯಾ -2025ರ ಪ್ರದರ್ಶನ ನಡೆಯಲಿದೆ. ಈ ಹಿನ್ನಲೆಯಲ್ಲಿ ಯಲಹಂಕ ಸುತ್ತಾಮುತ್ತಲಿನ ಪ್ರದೇಶದಲ್ಲಿ ಮಾಂಸ ಮಾರಾಟವನ್ನು ನಿಷೇಧ ಮಾಡಿ ಬಿಬಿಎಂಪಿ ಆದೇಶಿಸಿದೆ.
ಈ ಸಂಬಂಧ ಬಿಬಿಎಂಪಿಯ ಯಲಹಂಕದ ಜಂಟಿ ವಲಯ ಆಯುಕ್ತ ಮೊಹದ್ ನಯೀಮ್ ಮೊಯಿನ್ ಅವರು ಆದೇಶ ಹೊರಡಿಸಿದ್ದಾರೆ. ಅದರಲ್ಲಿ ಜನವರಿ 23ರಿಂದ ಫೆಬ್ರವರಿ.17ರವರೆಗೆ ಯಲಹಂಕದ ವಾಯುನೆಲೆಯಿಂದ 13 ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸ ಮಾರಾಟವನ್ನು ಮಾಡದಂತೆ ಸೂಚಿಸಿದ್ದಾರೆ.
ಎಲ್ಲಾ ಮಾಂಸ ಮಾರಾಟದ ಉದ್ದಿಮೆಗಳನ್ನು ಮುಚ್ಚುವಂತೆಯೂ ಸೂಚಿಸಿರುವಂತ ಅವರು, ಹೋಟೆಲ್ ಮತ್ತು ಡಾಬಾಗಳಲ್ಲಿ ಮಾಂಸಹಾರ ತಯಾರಿಕೆ, ಮಾರಾಟವನ್ನು ನಿಷೇಧಿಸಿದ್ದಾರೆ. ಒಂದು ವೇಳೆ ಈ ನಿಯಮ ಮೀರಿದ್ರೇ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಫೆ.1ರಿಂದ ಫೆ.17ರವರೆಗೆ ಏರೋ ಶೋ: ಯಲಹಂಕ ಸುತ್ತಮುತ್ತ ಕ್ರೇನ್ ಎತ್ತರ ತಗ್ಗಿಸಲು ಸೂಚನೆ | Aero India 2025
‘BPL, APL ಕಾರ್ಡ್’ದಾರರೇ ಗಮನಿಸಿ: ಜ.31 ‘e-KYC’ಗೆ ಲಾಸ್ಟ್ ಡೇಟ್, ಮಾಡಿಸದಿದ್ರೆ ಬರಲ್ಲ ರೇಷನ್