ವಿಜಯಪುರ : ಮೈಸೂರಿನ ಲಿಂಗಾಂಬುದ್ಧಿ ಸಾರ್ವಜನಿಕ ಉದ್ಯಾನವನದ ಬಳಿ ಚಿರತೆ ಪ್ರತ್ಯಕ್ಷವಾಗಿತ್ತು ಇದರ ಬೆನ್ನಲ್ಲೇ ಇದೀಗ ವಿಜಯಪುರದಲ್ಲೂ ಕೂಡ ಚಿರತೆ ಒಂದು ಪ್ರತ್ಯಕ್ಷ ಆಗಿದೆ ಎಂದು ಮಹಿಳೆಯೊಬ್ಬರು ನೋಡಿದ್ದಾಗಿ ಹೇಳಿಕೆ ನೀಡಿದ್ದಾರೆ.
ಹೌದು ಚಿರತೆ ಓಡಾಡುತ್ತಿರುವುದನ್ನು ನೋಡಿರುವುದಾಗಿ ಮಹಿಳೆಯೊಬ್ಬರು ಹೇಳಿದ್ದಾರೆ. ಚಿರತೆ ನೋಡಿ ಮನೆ ಬಾಗಿಲು ಹಾಕಿಕೊಂಡಿದ್ದೇ. ಆದರೆ ಕೆಲ ಕ್ಷಣಗಳ ಬಳಿಕ ಬಾಗಿಲು ತೆರೆದು ನೋಡಿದಾಗ ಚಿರತೆ ಇರಲಿಲ್ಲ ಎಂದು ಮಹಿಳೆ ತಿಳಿಸಿದ್ದಾರೆ.
ಮಹಿಳೆ ನೀಡಿದ ಮಾಹಿತಿಯ ಅನ್ವಯ ಸ್ಥಳಕ್ಕೆ ಅರಣ್ಯ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಸಾಮಾನ್ಯವಾಗಿ ಹಗಲಿನ ವೇಳೆ ಚಿರತೆ ಓಡಾಡುವುದಿಲ್ಲ. ಸ್ಥಳೀಯರ ಮಾಹಿತಿ ಮೇರೆಗೆ ಚಿರತೆಗಾಗಿ ಇದೀಗ ಅರಣ್ಯ ಸಿಬ್ಬಂದಿಗಳು ಶೋಧ ಕಾರ್ಯ ನಡೆಸುತ್ತಿದ್ದಾರೆ. ಸಾರ್ವಜನಿಕರು ಭಯ ಪಡದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಮನವಿ ಮಾಡಿದ್ದಾರೆ.