ಬೆಂಗಳೂರು : ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಗಾಂಜಾ ಮಾರಾಟ ಮಾಡುತ್ತಿದ್ದ ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ನನ್ನು ಇದೀಗ ಬೆಂಗಳೂರಿನ ಸೋಲದೇವನಹಳ್ಳಿ ಪೊಲೀಸರು ಅರೆಸ್ಟ್ ಮಾಡಿದ್ದು, ಆತನಿಂದ ಸುಮಾರು 48 ಲಕ್ಷಕ್ಕೂ ಹೆಚ್ಚಿನ ಗಾಂಜಾ ಹಾಗೂ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ.
ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್ ಬಂಧನವಾಗಿದ್ದು, ಬೆಂಗಳೂರಿನ ಉತ್ತರ ತಾಲೂಕಿನ ಚಿಕ್ಕಬಾಣಾವರದ ವಿನಾಯಕ ನಗರದಲ್ಲಿ ಆರೋಪಿಯನ್ನು ಅರೆಸ್ಟ್ ಮಾಡಲಾಗಿದೆ.ಸೋಲದೇವನಹಳ್ಳಿ ಪೊಲೀಸರಿಂದ ಆರೋಪಿ ಓಕೆಕೆ ಕ್ರಿಸ್ಟೋಫರ್ ಎನ್ನುವ ಆರೋಪಿಯನ್ನು ಸೆರೆ ಹಿಡಿದಿದ್ದಾರೆ. ಆತನಿಂದ 48 ಲಕ್ಷ ಮೌಲ್ಯದ 250 ಗ್ರಾಂ ಹೈಡ್ರೋ ಗಾಂಜಾ, ಹಾಗೂ 165 ಗ್ರಾಂ ಎಂಡಿಎಂಎ ಡ್ರಗ್ಸ್ ಅನ್ನು ಜಪ್ತಿ ಮಾಡಿದ್ದಾರೆ. ಈತ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಆರೋಪಿ ಗಾಂಜಾ ಮಾರುತಿದ್ದ ಎನ್ನಲಾಗಿದೆ. ಈ ಕುರಿತು ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ