ಮೈಸೂರು : ಇತ್ತೀಚಿಗೆ ಬೆಂಗಳೂರಿನ ಸುತ್ತಮುತ್ತ ಚಿರತೆ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿತ್ತು. ಇದೀಗ ಮೈಸೂರಿನಲ್ಲಿ ಕೂಡ ಚಿರತೆ ಪ್ರತ್ಯಕ್ಷವಾಗಿದ್ದು ಮೈಸೂರಿನ ಲಿಂಗಂಬುದ್ಧಿ ಉದ್ಯಾನವನದಲ್ಲಿ ಇದೀಗ ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದ ಹಲವರಿಗೆ ಚಿರತೆ ಓಡಾಡಿರುವುದು ಕಂಡು ಬಂದಿದೆ.
ಹೌದು ಮೈಸೂರಿನ ಲಿಂಗಾಂಬುದ್ಧಿ ಕೆರೆ ಉದ್ಯಾನವನದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ರಾಮಕೃಷ್ಣನಗರ ಸಮೀಪವಿರುವ ಲಿಂಗಾಂಬುದ್ದಿ ಕೆರೆ ಉದ್ಯಾನವನದಲ್ಲಿ ಚಿರತೆ ಪ್ರತ್ಯಕ್ಷವಾಗಿದ್ದು ಬೆಳಿಗ್ಗೆ ವಾಯುವಿಹಾರಕ್ಕೆ ತೆರಳಿದ್ದವರಿಗೆ ಚಿರತೆ ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ.
ಚಿರತೆ ಕಂಡ ತಕ್ಷಣ ಕೂಡಲೇ ಅರಣ್ಯ ಇಲಾಖೆಯ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ ಲಿಂಗಬುಂದ್ಧಿ ಕೆರೆ ಉದ್ಯಾನವನ ಸಾರ್ವಜನಿಕರ ಪ್ರವೇಶಕ್ಕೆ ಇದೀಗ ನಿರ್ಬಂಧ ವಿಧಿಸಲಾಗಿದ್ದುಚಿರತೆ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಚರಣೆ ನಡೆಸುತ್ತಿದ್ದಾರೆ.