ಬೆಂಗಳೂರು : ಈಗಾಗಲೇ ಸಾರಿಗೆ ಬಸ್ ಗಳಲ್ಲಿ ಟಿಕೆಟ್ ದರ ಶೇಕಡಾ 15 ರಷ್ಟು ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇದರ ಬೆನ್ನಲ್ಲೇ ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಬಿಗ್ ಶಾಕ್ ನೀಡುತ್ತಿದ್ದೂ, ಇಂದು ಮೆಟ್ರೋ ಪ್ರಯಾಣದ ಟಿಕೆಟ್ ದರ ಶೇಕಡ 40 ರಿಂದ 45ರಷ್ಟು ಹೆಚ್ಚಳ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಹೌದು, ನಮ್ಮ ಮೆಟ್ರೋ ಟಿಕೆಟ್ ದರ ಹೆಚ್ಚಿಸಲು ಬಿಎಂಆರ್ ಸಿಲ್ ಸಿದ್ದತೆ ನಡೆಸಿದ್ದು, ಶೇ.15 ರಿಂದ 20 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಜನವರಿ 18ರ ಇಂದು ದರ ಪರಿಷ್ಕರಣೆ ಸಮಿತಿ ಸಲ್ಲಿಸಲಿರುವ ಅಂತಿಮ ವರದಿ ಕುರಿತು ಸಮಾಲೋಚನೆ ನಡೆಯಲಿದೆ. ಇಂದು ಸುದ್ದಿಗೋಷ್ಟಿ ನಡೆಸಿ ಟಿಕೆಟ್ ದರ ಏರಿಕೆ ಬಗ್ಗೆ ಬಿಎಂಆರ್ ಸಿಎಲ್ ಮಾಹಿತಿ ನೀಡಲಿದೆ ಎಂದು ತಿಳಿದುಬಂದಿದೆ.
ನಮ್ಮ ಮೆಟ್ರೋ 2017ರಲ್ಲಿ ಕೊನೆಯ ಬಾರಿ ದರ ಪರಿಷ್ಕರಣೆ ಮಾಡಿತ್ತು. 10-15 ಪ್ರತಿಶತ ಟಿಕೆಟ್ ದರ ಏರಿಕೆ ಮಾಡಲಾಗಿತ್ತು. ಬಳಿಕ ಹಣದುಬ್ಬರ ಹೆಚ್ಚಳ, ಕಾರ್ಯಾಚರಣೆ ವೆಚ್ಚ ಹೆಚ್ಚಳ ನಮ್ಮ ಮೆಟ್ರೋ ನಿರ್ವಹಣೆ ಮೇಲೆ ಪರಿಣಾಮ ಬೀರುತ್ತಿದ್ದು ನಷ್ಟವನ್ನು ತಪ್ಪಿಸಲು ದರ ಏರಿಕೆ ಒಂದೇ ದಾರಿ ಎನ್ನಲಾಗಿದೆ.
ನಮ್ಮ ಮೆಟ್ರೋ ಪ್ರಯಾಣ ದರ ಈಗ ಕನಿಷ್ಠ 10 ರೂಪಾಯಿ ಇದ್ದರೆ ಗರಿಷ್ಠ 60 ರೂಪಾಯಿ ಆಗಿದೆ. ಮೆಟ್ರೋ ಕಾರ್ಡ್ ಮತ್ತು ಆನ್‌ಲೈನ್ ಟಿಕೆಟ್ ಬಳಕೆದಾರರಿಗೆ ಪ್ರಯಾಣ ವೆಚ್ಚದಲ್ಲಿ 5 ಪ್ರತಿಶತ ವಿನಾಯಿತಿ ಸಿಗುತ್ತಿದೆ. ಈಗ 20 ಪ್ರತಿಶತ ಬೆಲೆ ಏರಿಕೆಗೆ ಅನುಮೋದನೆ ಸಿಕ್ಕರೆ ಕನಿಷ್ಠ ದರ 12 ರೂಪಾಯಿಗೆ ಮತ್ತು ಗರಿಷ್ಠ ದರ 72 ರೂಪಾಯಿಗೆ ಏರಿಕೆಯಾಗಲಿದೆ. ಶೇಕಡ 40 ರಿಂದ 45ರಷ್ಟು ಪ್ರಯಾಣದ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಕನಿಷ್ಠ ದರ 10 ರೂಪಾಯಿ ಮುಂದುವರೆಯಲಿದ್ದು, ಗರಿಷ್ಠ ದರ 60 ರಿಂದ 90 ರೂ.ಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.