ತುಮಕೂರು: ಆನ್ ಲೈನ್ ಗೇಮ್ ಆಡಬೇಡ ಎಂಬುದಾಗಿ ಬುದ್ಧಿ ಹೇಳಿದ್ದಕ್ಕೆ ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ತುಮಕೂರಿನಲ್ಲಿ ನಡೆದಿದೆ.
ತುಮಕೂರು ನಗರದ ಹೊರಪೇಟೆಯ ಯುವಕ ಟಿ.ಎಸ್ ಭರತ್(24) ಎಂಬಾತನೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ.
ಭರತ್ ಕೆಲ ದಿನಗಳಿಂದ ಆನ್ ಲೈನ್ ಗೇಮ್ ಚಟಕ್ಕೆ ಬಿದ್ದಿದ್ದನು. ಈ ಗೇಮ್ ನಲ್ಲಿ 20 ಸಾವಿರ ಹಣ ಹಾಕಿ ಕಳೆದುಕೊಂಡಿದ್ದನು. ಈ ವಿಚಾರ ಗೊತ್ತಾದಂತ ತಾಯಿಯು, ಇನ್ಮುಂದೆ ಆನ್ ಲೈನ್ ಗೇಮ್ ಆಡೋದು ಬೇಡ ಎಂಬುದಾಗಿ ಬುದ್ಧಿ ಹೇಳಿದ್ದಾರೆ.
ಈ ವಿಚಾರಕ್ಕಾಗಿ ಭರತ್ ಸಿಟ್ಟು ಮಾಡಿಕೊಂಡು ತಮ್ಮ ಹಳೆಯ ಹೆಂಚಿನ ಮನೆಯಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಒಂದು ಕಡೆ ಕಾಂಗ್ರೆಸ್ ನಿಂದ, ಮತ್ತೊಂದು ಕಡೆ ಕಳ್ಳ ಖದೀಮರಿಂದ ಲೂಟಿ: ಛಲವಾದಿ ನಾರಾಯಣಸ್ವಾಮಿ ಕಿಡಿ
BREAKING:ದೆಹಲಿಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ | Ayushman Bharat