ಬೆಂಗಳೂರು: ತಾನು ದಪ್ಪಗಿದ್ದು, ತನ್ನದೇ ದೇಹವನ್ನು ಹೋಲುವಂತ ದಪ್ಪಗಿನ ಹುಡುಗಿ ಮದುವೆಯಾಗಲು ಸಿಗುತ್ತಿಲ್ಲ ಎಂಬುದಾಗಿ ಮನನೊಂದು ಯುವಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವಂತ ಘಟನೆ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ನಡೆದಿದೆ.
ಬೆಂಗಳೂರಿನ ಉತ್ತರ ತಾಲ್ಲೂಕಿನ ನಾರಯಣಪ್ಪನಪಾಳ್ಯದಲ್ಲಿ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದಂತ ವೆಂಕಟೇಶ್(29) ಎಂಬಾತನೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವಂತ ಯುವಕನಾಗಿದ್ದಾನೆ. ಗೋವಿಂದರಾಜು ಹಾಗೂ ಮಂಗಳಮ್ಮ ಎಂಬುವರ ಪುತ್ರ ವೆಂಕಟೇಶ್ ಆಗಿದ್ದಾರೆ.
ಮದುವೆಯಾಗೋದಕ್ಕಾಗಿ ಹುಡುಗಿಯನ್ನು ಹುಡುಕುತ್ತಿದ್ದನು. ಸುಮಾರು 15 ಹುಡುಗಿಯರನ್ನು ನೋಡಿದ್ದರೂ ವೆಂಕಟೇಶ್ ದಪ್ಪ ಇದ್ದಾನೆ ಅಂತ ಹುಡುಗಿ ಹಾಗೂ ಪೋಷಕರು ಮದುವೆ ನಿರಾಕರಿಸಿದ್ದರು.
ತನ್ನಷ್ಟೇ ದಪ್ಪಗಿರುವಂತ ಹುಡುಗಿ ಸಿಗುತ್ತಿಲ್ಲ ಎಂಬುದಾಗಿ ಮನನೊಂದಂತ ಆಟೋ ಚಾಲಕ ವೆಂಕಟೇಶ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ವೆಂಕಟೇಶ್ ಚಿಕ್ಕಮ್ಮ ಪೋನ್ ಮಾಡಿದರೂ ಪೋನ್ ಪಿಕ್ ಮಾಡದೇ ಇದ್ದಾಗ ಮನೆಗೆ ಬಂದು ನೋಡಿದಾಗ ಈ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪರಿಸರಸ್ನೇಹಿ ಅಟೋಮೊಬೈಲ್ ಕ್ಷೇತ್ರಕ್ಕೆ ಪಿಎಂ ಇ-ಡ್ರೈವ್, ಪಿಎಲ್ಐ ಕೊಡುಗೆ ನಿರ್ಣಾಯಕ: HDK
BREAKING:ದೆಹಲಿಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ | Ayushman Bharat