ಮಂಗಳೂರು: ಬೀದರ್ ನಲ್ಲಿ ಹಾಡಹಗಲೇ ಗುಂಡಿನ ದಾಳಿ ನಡೆಸಿ ಎಟಿಎಂಗೆ ತುಂಬಲು ತಂದಿದ್ದಂತ ಹಣವನ್ನು ದೋಚಿ ದರೋಡೆಕೋರರು ಪರಾರಿಯಾಗಿದ್ದ ಘಟನೆ ಹಸಿರಾಗಿರೋ ಮುನ್ನವೇ, ಮಂಗಳೂರಲ್ಲಿ ಇಂತದ್ದೇ ಘಟನೆ ನಡೆದಿದೆ. ಈ ದರೋಡೆ ಪ್ರಕರಣದಲ್ಲಿ ಬರೋಬ್ಬರಿ 10 ರಿಂದ 12 ಕೋಟಿಯಷ್ಟು ಚಿನ್ನ, ಹಣ ದೋಚಿ ಪರಾರಿಯಾಗಿರೋದಾಗಿ ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದು ಬಂದಿದೆ.
ಮಂಗಳೂರಿನ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಗೆ ನುಗ್ಗಿರುವಂತ ಐವರು ದರೋಡೆಕೋರರ ತಂಡವು, ಬಂದೂಕು ತೋರಿಸಿ ಹಾಡಹಗಲೇ ಚಿನ್ನ, ಒಡವೆ ನಗದು ದೋಚಿ ಪರಾರಿಯಾಗಿದೆ.
ಫಿಯೇಟ್ ಕಾರಿನಲ್ಲಿ ಬಂದಂತ ಐವರ ತಂಡ ಈ ಕೃತ್ಯವೆಸಗಿ ಪರಾರಿಯಾಗಿದೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.
ಇನ್ನೂ ಬ್ಯಾಂಕ್ ನಲ್ಲಿ ಪೊಲೀಸರಿಂದ ಪರಿಶೀಲನೆ ನಡೆಸಲಾಗುತ್ತಿದ್ದು, ಪ್ರಾಥಮಿಕ ಮಾಹಿತಿಯಂತೆ ಉಳ್ಳಾಲದ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿಂದ ಬರೋಬ್ಬರಿ 10 ರಿಂದ 12 ಕೋಟಿ ಮೌಲ್ಯದ ಚಿನ್ನ, ನಗದನ್ನು ದರೋಡೆಕೋರರು ದೋಷಿಕೊಂಡು ಪರಾರಿಯಾಗಿರೋದಾಗಿ ಹೇಳಲಾಗುತ್ತಿದೆ. ಈ ಬಗ್ಗೆ ತನಿಖೆಯಿಂದ ಖಚಿತ ಮಾಹಿತಿ ಹೊರಬೀಳಬೇಕಿದೆ.
BREAKING:ದೆಹಲಿಯಲ್ಲಿ ‘ಆಯುಷ್ಮಾನ್ ಭಾರತ್’ ಯೋಜನೆ ಜಾರಿಗೆ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ | Ayushman Bharat