ಧಾರವಾಡ : ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧರೊಬ್ಬರು ಪಕ್ಕದ ಮನೆಯಲ್ಲಿರುವ 120 ಅಡಿ ಆಳವಿರುವ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮಾಳಮಡ್ಡಿಯಲ್ಲಿ ನಡೆದಿದೆ.
ಮೃತ ವೃದ್ಧರನ್ನು ಸುರೇಶ್ ಕುಲಕರ್ಣಿ (68) ಎಂದು ತಿಳಿದುಬಂದಿದೆ.ಬೆಳಿಗ್ಗೆಯಿಂದ ಸುರೇಶ್ ಅವರು ಕಾಣೆಯಾಗಿದ್ದರು. ಈ ವೇಳೆ ಕುಟುಂಬಸ್ಥರು ಹುಡುಕಿದಾಗ ಮನೆಪಕ್ಕದ ಬಾವಿ ಬಳಿ ಚಪ್ಪಲಿ, ಮೊಬೈಲ್ ಪತ್ತೆಯಾಗಿದ್ದವು. ಇದರಿಂದ ಸಹಜವಾಗಿ ಕುಟುಂಬಸ್ಥರು ಗಾಬರಿಯಾಗಿದ್ದಾರೆ.
ಈ ಹಿನ್ನಲೆ ಅಕ್ಕ-ಪಕ್ಕದ ಸಿಸಿ ಕ್ಯಾಮರಾ ಪರಿಶೀಲಿಸಿದಾಗ ಬಾವಿ ಬಳಿ ಬಂದ ಸುರೇಶ ಅವರು ಚಪ್ಪಲಿ, ಮೊಬೈಲ್ ಬದಿಗಿಟ್ಟು ಬಾವಿಕಟ್ಟೆಯಿಂದ ಜಿಗಿದಿದ್ದಾರೆ. ಈ ಎಲ್ಲ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಶವ ಪತ್ತೆಗಾಗಿ ಅಗ್ನಿಶಾಮಕ ದಳ ಕಾರ್ಯಾಚರಣೆ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.