ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಪತ್ತೆಗಾಗಿ ಇದೀಗ ಪೊಲೀಸರು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದು, ಸದ್ಯ ಮುಂಬೈ ಪೊಲೀಸರು ಓರ್ವ ದಾಳಿಕೊರನನ್ನು ಅರೆಸ್ಟ್ ಮಾಡಿದ್ದಾರೆ.
ಹೌದು ಈಗಾಗಲೇ ಮುಂಬೈ ಪೋಲಿಸರಿಂದ ಆರೋಪಿಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿದ್ದು, ಬಾಂದ್ರಾ ರೈಲು ನಿಲ್ದಾಣದ ಬಳಿ ಆರೋಪಿಯ ಕುರುಹು ಪತ್ತೆಯಾಗಿದೆ ಎನ್ನಲಾಗುತ್ತಿದೆ. ಆರೋಪಿಯ ಕೊನೆಯ ಬಾರಿಗೆ ರೈಲು ನಿಲ್ದಾಣ ಬಳಿ ಇದ್ದಂತಹ ಕುರುಹು ಇದೀಗ ಪತ್ತೆಯಾಗಿತ್ತು. ಸದ್ಯ ಪೊಲೀಸರು ಇದೀಗ ಓರ್ವ ದಾಳಿಕೋರನನ್ನು ಬಂಧಿಸಿದ್ದಾರೆ ಎನ್ನಲಾಗಿದೆ.ಆತನನ್ನು ಇದೀಗ ಮುಂಬೈ ಪೊಲೀಸರು ಅರೆಸ್ಟ್ ಮಾಡಿ ಬಾಂದ್ರಾ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದಿದ್ದು, ಪೊಲೀಸರ ಹೆಚ್ಚಿನ ವಿಚಾರಣೆ ಬಳಿಕ ಯಾವ ಕಾರಣಕ್ಕಾಗಿ ದಾಳಿ ಮಾಡಿದ್ದ ಎನ್ನುವುದು ಬಯಲಾಗಲಿದೆ.