ಇದು 12 ವರ್ಷಕ್ಕೊಮ್ಮೆ ನಡೆಯೋ ಕುಂಭಮೇಳವಲ್ಲ, ಮನುಷ್ಯನ ಏಳೂ ಜನ್ಮಗಳ ಪಾಪಗಳನ್ನೆಲ್ಲಾ ಒಂದೇ ಸಲಕ್ಕೆ ತೊಳೆಯಬಲ್ಲಂತಹ, ಶತಮಾನಗಳಿಗೊಮ್ಮೆ ಘಟಿಸೋ ದಿವ್ಯಾದ್ಭುತ ಪುಣ್ಯಸ್ನಾನದ ಮಹಾಕುಂಭಮೇಳ…144 ವರ್ಷಕ್ಕೆ ಒಮ್ಮೆ ನಡೆಯುವ ಮಹಾಕುಂಭಮೇಳ
ಈ ಬಾರಿ ಪ್ರಯಾಗರಾಜ್.. ಇದೇ ಸಂಕ್ರಾಂತಿಯಿಂದ ಇಂತಾದ್ದೊಂದು ಮಹಾ ಅದ್ಭುತಕ್ಕೆ ತೆರೆದುಕೊಳ್ಳುತ್ತಿದೆ. ಅದ್ಯಾವ್ ಜನ್ಮದಲ್ ಅದೇನ್ ಪುಣ್ಯ ಮಾಡಿದ್ವೋ ನಾವೆಲ್ಲಾ…. ಮನುಷ್ಯನಿಗೆ ಏಳು ಜನ್ಮಕ್ಕೊಮ್ಮೆ ಮಾತ್ರ ಪ್ರಾಪ್ತಿಯಾಗೋ ಪುಣ್ಯವೆನ್ನಲಾಗುವ, ಬರೋಬ್ಬರಿ 144ವರ್ಷಕ್ಕೊಮ್ಮೆ ಘಟಿಸೋ ಮಹಾಕುಂಭಮೇಳಕ್ಕೆ ಇದೇ ಜನವರಿ 13ರ ಪುಷ್ಯ ಹುಣ್ಣಿಮೆಯಂದು ನಾವೆಲ್ಲಾ ಸಾಕ್ಷಿಯಾಗಲಿದ್ದೇವೆ…
ಇದೇ ಸಂಕ್ರಾಂತಿಯಿಂದ…
ಪ್ರಯಾಗರಾಜ್ ಮಹಾಕುಂಭಮೇಳವು ಫೆಬ್ರವರಿ 26ರ ಶಿವರಾತ್ರಿಯಂದು ಕೊನೆಗೊಳ್ಳಲಿದೆ.
ಕುಂಭಮೇಳದ ಕೆಲವೊಂದು ವಿಶೇಷ ಸ್ನಾನಗಳು.
ಜನವರಿ 13 : ಪುಷ್ಯಹುಣ್ಣಿಮೆ
ಜನವರಿ 14 : ಮಕರಸಂಕ್ರಾಂತಿ.
ಜನವರಿ 29 : ಮೌನಿ ಅಮವಾಸ್ಯೆ
ಫೆಬ್ರವರಿ 03 : ವಸಂತಪಂಚಮಿ.
ಫೆಬ್ರವರಿ 12 : ಮಾಘಹುಣ್ಣಿಮೆ. ಹಾಗೂ,
ಫೆಬ್ರವರಿ 26 : ಮಹಾಶಿವರಾತ್ರಿ.
ಕುಂಭಮೇಳದಲ್ಲಿ ಮೂರು ವಿಧ…
1. ಪ್ರತಿ 12 ವರ್ಷಗಳಿಗೊಮ್ಮೆ ಆಚರಿಸೋದು ಪೂರ್ಣ ಕುಂಭಮೇಳ. ಇದನ್ನು ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿಲ್ಲಿ ಆಚರಿಸಲಾಗುತ್ತದೆ.
2. ಈ ಪೂರ್ಣಕುಂಭ ಮೇಳವು 12 ಬಾರಿ ನಡೆದು ಒಂದು ವೃತ್ತ ಪೂರ್ಣವಾದಾಗ (12×12 = 144) ಅಂದರೆ 144ವರ್ಷಗಳಿಗೊಮ್ಮೆ ನಡೆಯೋದು ಮಹಾಕುಂಭಮೇಳ.ಈ ಬಾರಿ ನಡೀತಿರೋದು ಕೂಡಾ ಇದೇ…
3. ಪ್ರತಿ ಆರು ವರ್ಷಗಳಿಗೊಮ್ಮೆ ಅರ್ಧಕುಂಭದ ಹೆಸರಲ್ಲಿ ಕುಂಭಮೇಳದ ಆಯೋಜನೆಯಾಗುತ್ತದೆ. ಆದರೆ ಇದು ಪ್ರಯಾಗರಾಜ್ ಹಾಗೂ ಹರಿದ್ವಾರದಲ್ಲಿ ಮಾತ್ರ ಆಚರಿಸಲಾಗುತ್ತದೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ವಿದ್ವಾನ್ ವಿದ್ಯಾಧರ್ ತಂತ್ರಿ ಜ್ಯೋತಿಷ್ಯರ ಮೊಬೈಲ್ ಸಂಖ್ಯೆ 9686268564 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ. ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ. ನಿಮ್ಮ ಸಮಸ್ಯೆಗಳಾದ ಆರೋಗ್ಯ, ಸಂತಾನ, ಸಾಲದ ಬಾಧೆ, ಪ್ರೀತಿಯಲ್ಲಿ ನಂಬಿ ಮೋಸ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ, ದೃಷ್ಟಿ ದೋಷ, ಮನೆಯಲ್ಲಿ ದಟ್ಟದರಿದ್ರ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬದ ಕಷ್ಟ, ಹಣಕಾಸಿನ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಲು ಈಗಲೇ ಕರೆ ಮಾಡಿ 9686268564
ಕುಂಭಮೇಳವು… ಪ್ರಯಾಗರಾಜ್, ಹರಿದ್ವಾರ, ನಾಸಿಕ್ ಹಾಗೂ ಉಜ್ಜಯಿನಿಲ್ಲಿ ಆಚರಿಸಲಾಗುತ್ತದೆ. ಈ ನಾಲ್ಕು ಜಾಗಗಳಲ್ಲೇ ಯಾಕೆ ಎಂದರೆ, ಅಮೃತಕ್ಕಾಗಿ ಸಮುದ್ರಮಂಥನವಾದ ಜಾಗವೇ ಗಂಗಾ ಯಮುನಾ ಸರಸ್ವತಿ ನದಿಗಳ ಸಂಗಮಕ್ಷೇತ್ರ ಪ್ರಯಾಗ್ ರಾಜ್. ಅಮೃತಕ್ಕಾಗಿ ಕಿತ್ತಾಟ ನಡೆದಾಗ ಮೋಹಿನಿ ಅವತಾರವೆತ್ತೋ ಮಹಾವಿಷ್ಣು ಆ ಅಮೃತ ತುಂಬಿದ್ದ ಕುಂಭವನ್ನು ಹೊತ್ತೊಯ್ಯುವಾಗ ಅದರ ನಾಲ್ಕು ಹನಿಗಳು ಭೂಮಿಯ ನಾಲ್ಕು ಕಡೆ ಬಿದ್ದವಂತೆ. ಆ ನಾಲ್ಕು ಹನಿಗಳು ಬಿದ್ದ ಜಾಗವೇ ಈ ನಾಲ್ಕು ಪುಣ್ಯಕ್ಷೇತ್ರಗಳು…