ಬೀದರ್ : ಬೀದರ್ ಹಾಡು ಹಗಲೇ ಶೂಟೌಟ್ ಮಾಡಿ 83 ಲಕ್ಷ ದರೋಡೆ ಕೇಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಘಟನೆಯಲ್ಲಿ ಇಬ್ಬರೂ ಸಿಬ್ಬಂದಿಗಳು ಗಾಯಗೊಂಡಿದ್ದು ಇದರಲ್ಲಿ ನಿನ್ನೆ ಗಿರಿ ವೆಂಕಟೇಶ್ ಎನ್ನುವ ಸಿಬ್ಬಂದಿ ನಿನ್ನೆ ಸಾವನಪ್ಪಿದ್ದಾನೆ. ಇನ್ನೋರ್ವ ಗಾಯಗೊಂಡಂತಹ ಸಿಬ್ಬಂದಿ ಶಿವಕುಮಾರ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ನಿನ್ನೆ ರಾತ್ರಿ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಶಿವಕುಮಾರ್ ಆರೋಗ್ಯ ವಿಚಾರಿಸಿದರು.
ಹೌದು ಬೀದರ್ ಉಸ್ತುವಾರಿ ಸಚಿವ ಈಶ್ವರ ಬಿ ಖಂಡ್ರೆ ಹೈದ್ರಾಬಾದ್ ನ ಕೇರ್ ಆಸ್ಪತ್ರೆಗೆ ನಿನ್ನೆ ರಾತ್ರಿ 11 ಗಂಟೆ ಸುಮಾರಿನಲ್ಲಿ ಭೇಟಿ ನೀಡಿ, ಬೀದರ್ ನಲ್ಲಿ ನಿನ್ನೆ ಎ.ಟಿ.ಎಂ. ದರೋಡೆ ವೇಳೆ ಗುಂಡೇಟಿನಿಂದ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಸಿಬ್ಬಂದಿ ಶಿವಕುಮಾರ್ ಆರೋಗ್ಯ ವಿಚಾರಿಸಿದರು. ಶಿವಕುಮಾರ್ ಕುಟುಂಬದವರಿಗೆ ಧೈರ್ಯ ಹೇಳಿದ ಅವರು, ಶಿವಕುಮಾರ್ ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದರು. ನಂತರ, ವೈದ್ಯರೊಂದಿಗೆ ಸಮಾಲೋಚಿಸಿದ ಸಚಿವರು ಎಲ್ಲ ಅಗತ್ಯ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.
ಮೃತ ಗಿರಿ ಮನೆಗೆ ಖಂಡ್ರೆ ಭೇಟಿ
ಇನ್ನು ಈ ಒಂದು ಪ್ರಕರಣಕ್ಕೆ ಸಂಬಂಧಪಟ್ಟಂತೆ ನಿನ್ನೆ ಗಿರಿ ವೆಂಕಟೇಶ ಎನ್ನುವ ಸಿಬ್ಬಂದಿ ದರೋಡೆಕೋರ ಗುಂಡಿಗೆ ಬಲಿಯಾಗಿದ್ದಾನೆ.ಹಾಗಾಗಿ ಇಂದು ಮೃತ ಗಿರಿ ವೆಂಕಟೇಶ್ ನಿವಾಸಕ್ಕೆ ಸಚಿವ ಈಶ್ವರ ಖಂಡ್ರೆ ಅವರು ಭೇಟಿ ನೀಡಲಿದ್ದಾರೆ. ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಈಶ್ವರ ಖಂಡ್ರೆ ಅವರು ಇಂದು ಮೃತ ಗಿರಿ ವೆಂಕಟೇಶ್ ಅವರ ಮನೆಗೆ ಭೇಟಿ ನೀಡಿ, ಗಿರಿ ವೆಂಕಟೇಶ ಕುಟುಂಬಸ್ಥರಿಗೆ ಸಚಿವ ಈಶ್ವರ ಖಂಡ್ರೆ ಸಾಂತ್ವನ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.