ಬೆಂಗಳೂರು : ಇತ್ತೀಚಿಗೆ ಬೆಂಗಳೂರಿನ ಗೃಹಕಚೇರಿ ಕೃಷ್ಣಾದಲ್ಲಿ ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಶರಣಾಗಿದ್ದ ಆರುವಿನ ನಕ್ಷಲರನ್ನು ಎನ್ಐಎ ಕೋರ್ಟ್ ಜನವರಿ 23ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದು ಈ ಹಿನ್ನೆಲೆಯಲ್ಲಿ ಇಂದಿನಿಂದ ನಕ್ಸಲರ ವಿಚಾರಣೆ ಆರಂಭವಾಗಲಿದೆ.
ಹೌದು 6 ನಕ್ಸಲರನ್ನು ಪೊಲೀಸರ ವಶಕ್ಕೆ ನೀಡಿದ ಎನ್ಐಎ ಕೋರ್ಟ್ ಜನವರಿ 23ರ ವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಹಾಗಾಗಿ ಇಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಂದ ನಕ್ಸಲರ ವಿಚಾರಣೆ ನಡೆಯಲಿದೆ. ಚಿಕ್ಕಮಂಗಳೂರು ಎಸ್ಪಿ ನೇತೃತ್ವದಲ್ಲಿ ವಿಚಾರಣೆ ನಡೆಯಲಿದೆ.
ಶರಣಾಗತಿಯಾಗಿರುವ ಮುಂಡಗರು ಲತಾ, ಸುಂದರಿ, ವನಜಾಕ್ಷಿ, ಜಯಣ್ಣ, ಜೀಶ, ಹಾಗೂ ವಸಂತ್ ವಿಚಾರಣೆ ನಡೆಯಲಿದೆ. ಶಸ್ತ್ರಾಸ್ತ್ರ ಸೇರಿದಂತೆ ಹಳೆಯ ಪ್ರಕರಣಗಳು ಕುರಿತು ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ.