ಹೈದ್ರಾಬಾದ್ : ಕರ್ನಾಟಕದ ಬೀದರ್ ನಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಎಟಿಎಂಗೆ ಹಾಕಬೇಕಿದ್ದ 93 ಲಕ್ಷ ರೂ ದರೋಡೆ ಮಾಡಿ ತೆಲಂಗಾಣಕ್ಕೆ ಪರಾರಿಯಾಗಿದ್ದ ದರೋಡೆಕೋರರು ಹೈದರಾಬಾದ್ ನಲ್ಲೂ ಶೂಟೌಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.ಮೂಲಗಳ ಪ್ರಕಾರ ಕರ್ನಾಟಕದಿಂದ ತಪ್ಪಿಸಿಕೊಂಡು ತೆಲಂಗಾಣಕ್ಕೆ ಪರಾರಿಯಾಗಿದ್ದ ದರೋಡೆಕೋರರ ತಂಡ ತೆಲಂಗಾಣ ರಾಜಧಾನಿ ಹೈದರಾಬಾದ್ ನ ಅಫ್ಜಲ್ ಗಂಜ್ ನಲ್ಲಿರುವ ಒಂದು ಟ್ರಾವೆಲ್ ಕಚೇರಿಗೆ ನುಗ್ಗಿ ಅಲ್ಲಿನ ಮ್ಯಾನೇಜರ್ ಮೇಲೂ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಬೀದರ್ ಪೊಲೀಸರು ಅಪರಾಧಿಗಳನ್ನು ಹಿಡಿಯಲು ವಿಶೇಷ ತಂಡಗಳನ್ನು ರಚನೆ ಮಾಡಿದ್ದರು. ಬೀದರ್ ನಲ್ಲಿ ದರೋಡೆ ಮಾಡಿರುವ ದುಷ್ಕರ್ಮಿಗಳು ಇಲ್ಲಿಂದ ತಪ್ಪಿಸಿಕೊಂಡ ಬಳಿಕ ಹೈದರಾಬಾದ್ ತಲುಪಿದ್ದಾರೆ. ಶಸ್ತ್ರಸಜ್ಜಿತ ದರೋಡೆಕೋರರು ಹೈದರಾಬಾದ್‌ನ ಅಫ್ಜಲ್‌ಗಂಜ್‌ನಲ್ಲಿ ಪೊಲೀಸರ ಮೇಲೆಯೇ ಗುಂಡು ಹಾರಿಸಿದ್ದಾರೆ.ಜನನಿಬಿಡ ಪ್ರದೇಶದಲ್ಲೇ ಪೊಲೀಸರ ಮೇಲೆ ಗುಂಡು ಹಾರಿಸಿದ ಘಟನೆ ಈ ಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ಬೀದರ್ ನಿಂದ ಓಡಿಹೋದ ಕಳ್ಳರನ್ನು ಹಿಡಿಯಲು ಪೊಲೀಸ್ ತಂಡಗಳು ಬೆನ್ನು ಬಿದ್ದಿದ್ದು ಹೈದರಾಬಾದ್‌ನ ಅಫ್ಜಲ್‌ಗಂಜ್‌ನಲ್ಲಿ ಮುಖಾಮುಖಿಯಾಗಿದ್ದು ಗುಂಡಿನ ದಾಳಿ ನಡೆದಿದೆ.
ಹಾಡಹಗಲೇ ದರೋಡೆ
ಬೀದರ್ ನಗರದಲ್ಲಿ ಗುರುವಾರ ಬೆಳಗ್ಗೆ ನಡೆದ ಶೂಟೌಟ್ ವಿಚಾರ ತಿಳಿದು ರಾಜ್ಯದ ಜನತೆಯೇ ಬೆಚ್ಚಿಬಿದ್ದಿದ್ದಾರೆ. ಎಸ್‌ಬಿಐ ಮುಖ್ಯ ಕಚೇರಿ ಎದುರಿನಲ್ಲಿ ಗುಂಡಿನ ದಾಳಿ ನಡೆದಿದೆ. ಸಮೀಪದಲ್ಲೇ ಜಿಲ್ಲಾಧಿಕಾರಿಗಳ ಕಚೇರಿಯೂ ಇದ್ದು, ಆದರೂ ದರೋಡೆಕೋರರು ನಿರ್ಭಯವಾಗಿ ನಡುರಸ್ತೆಯಲ್ಲಿ ಪಿಸ್ತೂಲ್ ಹಿಡಿದು ಇಬ್ಬರು ಸಿಬ್ಬಂದಿ ಮೇಲೆ ಗುಂಡಿನ ದಾಳಿ ನಡೆಸಿ 93 ಲಕ್ಷ ರೂಪಾಯಿ ಹಣ ಇದ್ದ ಪೆಟ್ಟಿಗೆಯನ್ನು ತೆಗೆದುಕೊಂಡಿ ಪರಾರಿಯಾಗಿದ್ದರು.
ನೂರಾರು ಜನ ಈ ಭೀಕರ ದೃಶ್ಯವನ್ನು ಮೂಕ ಪ್ರೇಕ್ಷಕರಂತೆ ನೋಡಿದರು. ದುಷ್ಕರ್ಮಿಗಳ ಕೈಯಲ್ಲಿ ಪಿಸ್ತೂಲ್ ಇರುವ ಕಾರಣ ಜನ ಭಯಬೀತರಾಗಿದ್ದರು. ಘಟನೆಯನ್ನು ಕರ್ನಾಟಕ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ದರೋಡೆಕೋರರನ್ನು ಬಂಧಿಸಲು ವಿಶೇಷ ತಂಡಗಳನ್ನು ರಚನೆ ಮಾಡಿದೆ.
An exchange of fire took place between a gang of robbers and Bidar police in Hyderabad's Afzal Gunj area on Thursday, January 16. One person has been injured in the attack.
Karnataka's Bidar police came to Hyderabad in search of a gang of robbers. It is reported that after… pic.twitter.com/BKSGvQWcLi
— The Siasat Daily (@TheSiasatDaily) January 16, 2025