ಬೆಂಗಳೂರು: 2025ನೇ ಸಾಲಿನ ಇಂಜಿನಿಯರಿಂಗ್, ಯೋಗ ಸೇರಿದಂತೆ ವಿವಿಧ ಕೋರ್ಸ್ ಗಳ ವ್ಯಾಸಂಗಕ್ಕಾಗಿ ಸಿಇಟಿ 2025ರ ಪರೀಕ್ಷೆಗೆ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟಿಸಿದೆ.
ಇಂದು ಪತ್ರಿಕಾ ಪ್ರಕಟಣೆಯಲ್ಲಿ ಕೆಇಎ ಮಾಹಿತಿ ನೀಡಿದ್ದು, 2025ನೇ ಸಾಲಿನ ಇಂಜಿನಿಯರಿಂಗ್, ಯೋಗ ಮತ್ತು ನ್ಯಾಚುರೋಪತಿ, ಬಿ-ಫಾರ್ಮ್ ಮತ್ತು ಫಾರ್ಮ್-ಡಿ, ಕೃಷಿ ವಿಜ್ಞಾನ ಕೋರ್ಸುಗಳು, ವೆಟರಿನರಿ ಹಾಗೂ ಬಿಎಸ್ಸಿ ನರ್ಸಿಂಗ್ ವೃತ್ತಿಪರ ಕೋರ್ಸುಗಳ ಪ್ರವೇಶಕ್ಕಾಗಿ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ದಿನಾಂಕ 16-04-2025 ಮತ್ತು 17-04-2025ರಂದು ನಡೆಸಲು ನಿಗದಿಪಡಿಸಲಾಗಿದೆ ಎಂಬುದಾಗಿ ತಿಳಿಸಿದೆ.
ಹೀಗಿದೆ ಸಾಮಾನ್ಯ ಪ್ರವೇಶ ಪರೀಕ್ಷೆ 2025ರ ವೇಳಾಪಟ್ಟಿ
- ದಿನಾಂಕ 16-04-2025ರ ಬುಧವಾರ ಬೆಳಿಗ್ಗೆ 10.30ರಿಂದ 11.50ರವರೆಗೆ ಭೌತಶಾಸ್ತ್ರ. ಮಧ್ಯಾಹ್ನ 2.30ರಿಂದ 3.50ರವರೆಗೆ ರಾಸಾಯನಶಾಸ್ತ್ರ.
- ದಿನಾಂಕ 17-04-2025ರ ಗುರುವಾರದಂದು ಬೆಳಿಗ್ಗೆ 10.30ರಿಂದ 11.50ರವರೆಗೆ ಗಣಿತ ಶಾಸ್ತ್ರ. ಮಧ್ಯಾಹ್ನ 2.30ರಿಂದ 3.50ರವರೆಗೆ ಜೀವಶಾಸ್ತ್ರ ಪರೀಕ್ಷೆ.
ಇನ್ನೂ ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳ ಕನ್ನಡ ಭಾಷಾ ಪರೀಕ್ಷೆಯನ್ನು ಬೆಂಗಳೂರು, ಬೆಳಗಾವಿ, ವಿಜಯಪುರ ಮತ್ತು ಮಂಗಳೂರು ಜಿಲ್ಲಾ ಕೇಂದ್ರಗಳಲ್ಲಿ ದಿನಾಂಕ 18-04-2025ರ ಶುಕ್ರವಾರ ಬೆಳಿಗ್ಗೆ 10.30ರಿಂದ 11.30ರ ವರೆಗೆ 4ನೇ ತರಗತಿಯ ಮಟ್ಟದ 50 ಅಂಕಗಳ ಪರೀಕ್ಷೆ ನಡೆಸಲು ನಿರ್ಧರಿಸಿದೆ.
ಸಿಇಟಿ-2025ಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 23-01-2025ರಿಂದ ಪ್ರಾರಂಭಿಸಲಾಗುವುದು. ಅಭ್ಯರ್ಥಿಗಳಿಗೆ ಲಾಗಿನ್ ಸಂದರ್ಭದಲ್ಲಿ ನಮೂದಿಸಿವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಿ ಪ್ರಮಾಣೀಕರಿಸಿದ ನಂತ್ರ ಅರ್ಜಿ ಭರ್ತಿ ಮಾಡಲು ಅವಕಾಶ ನೀಡಲಾಗುತ್ತದೆ. ಆದ್ದರಿಂದ ಅಭ್ಯರ್ಥಿಗಳು ಅವರದೇ ಮೊಬೈಲ್ ಸಂಖ್ಯೆಯನ್ನು ಮಾತ್ರ ನೀಡಬೇಕು. ಒಂದು ಮೊಬೈಲ್ ಸಂಖ್ಯೆಯನ್ನು ಒಬ್ಬ ಅಭ್ಯರ್ಥಿ ಮಾತ್ರ ಉಪಯೋಗಿಸಬಹುದು. ಮೊಬೈಲ್ ಸಂಖ್ಯೆ ಬದಲಾವಣೆ ಯಾವುದೇ ಹಂತದಲ್ಲಿ ಪರಿಗಣಿಸುವುದಿಲ್ಲ ಅಂತ ತಿಳಿಸಿದೆ.
BREAKING: ಸಾಗರದ ‘ಗಣಪತಿ ಬ್ಯಾಂಕ್’ ಅಧ್ಯಕ್ಷರಾಗಿ ಶ್ರೀನಿವಾಸ್ ಮೇಸ್ತ್ರಿ, ಉಪಾಧ್ಯಕ್ಷರಾಗಿ ವಿ.ಶಂಕರ್ ಆಯ್ಕೆ