ಶಿವಮೊಗ್ಗ : ಯುವ ಹೋಟೆಲ್ ಉದ್ಯಮಿಯೊಬ್ಬರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದಲ್ಲಿ ನಡೆದಿದೆ. ನಿನ್ನೆ ಈ ಒಂದು ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಮೃತ ಉದ್ಯಮಿಯನ್ನು ಮಿಥುನ್ (34) ಎಂದು ತಿಳಿದುಬಂದಿದೆ. ಮಿಥುನ್ ತೀರ್ಥಹಳ್ಳಿ ಪಟ್ಟಣದ SBI ಬ್ಯಾಂಕ್ ಬಳಿ ಹೋಟೆಲ್ ನಡೆಸುತ್ತಿದ್ದರು. ತಾಲೂಕಿನ ಹಂಡಿಗೆ ಮೂಲದ ಇವರು ಹೋಟೆಲ್ ಉದ್ಯಮವನ್ನು ಆರಂಭ ಮಾಡಿದ್ದರು.
ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಈ ಒಂದು ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಮೃತ ಮಿಥುನ್ ಪತ್ನಿ ಮತ್ತು 8 ತಿಂಗಳ ಮಗು ಜತೆ ಬಾಳೆಬೈಲಿನಲ್ಲಿ ವಾಸವಾಗಿದ್ದರು. ಘಟನೆ ಕುರಿತು ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.