ದಾವಣಗೆರೆ : ಮುಂದಿನ ದಿನಗಳಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರನ್ನು ಸಿಎಂ ಮಾಡಿಯೇ ಮಾಡುತ್ತೇವೆ. ತಾಕತ್ತಿದ್ದರೆ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಇಳಿಸಿ ನೋಡೋಣ ಎಂದು ದಾವಣಗೆರೆಯಲ್ಲಿ ಬಿಜೆಪಿಯ ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ತಿಳಿಸಿದರು.
ಇಂದು ದಾವಣಗೆರೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮರುಭೂಮಿಯಲ್ಲಿ ಓಯಸಿಸ್ ಸಿಕ್ಕ ರೀತಿ ಪಕ್ಷಕ್ಕೆ ಬಿವೈ ವಿಜಯೇಂದ್ರ ಸಿಕ್ಕಿದ್ದಾರೆ. ವಿಜಯೇಂದ್ರ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಪ್ರಧಾನಿ ಮೋದಿ ಹಾಗೂ ಅಮಿತ್ ಶಾ. ವಕ್ಫ್ ಅಂತ ಹೇಳಿಕೊಂಡು ಒಂದು ತಂಡ ಗೊಂದಲ ಮಾಡುತ್ತಿದೆ ಎಂದು ಪ್ರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಬಣಕ್ಕೆ ತಿರುಗೇಟು ನೀಡಿದರು.
ಬಿಜೆಪಿಯನ್ನು ಸಂಘಟಿಸಲು ಮತ್ತು ಪುನಃ ಅಧಿಕಾರಕ್ಕೆ ತರಲು ಬಿಎಸ್ ಯಡಿಯೂರಪ್ಪನವರು ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಲಿದ್ದಾರೆಯೇ ಹೊರತು ಬಿವೈ ವಿಜಯೇಂದ್ರರನ್ನು ಮುಖ್ಯಮಂತ್ರಿ ಮಾಡಲು ಅಲ್ಲ, ಅವರನ್ನು ಸಿಎಂ ಮಾಡಬೇಕೆನ್ನುವುದು ರಾಜ್ಯದ ಕಾರ್ಯಕರ್ತರ ಮತ್ತು ಜನರ ಸಂಕಲ್ಪವಾಗಿದೆ, ಅವರನ್ನು ಮುಖ್ಯಮಂತ್ರಿ ಮಾಡೇ ಮಾಡುತ್ತೇವೆ ಎಂದು ರೇಣುಕಾಚಾರ್ಯ ಹೇಳಿದರು.
ಮಹಾನ್ ನಾಯಕನೊಬ್ಬ ಸೋತ ಶಾಸಕರ ಸಭೆಯ ನಂತರ 17 ಜನ ತನಗೆ ಫೋನ್ ಮಾಡಿ ವಿಜಯೇಂದ್ರನ ಒತ್ತಾಯಕ್ಕೆ ಮಣಿದು ಸಭೆಗೆ ಹೋಗಿದ್ದೆವು ಅಂದಿದ್ದಾನೆ, ಬೇರೆ ಪಕ್ಷದಲ್ಲಿದ್ದ ಅವನು ಯಡಿಯೂರಪ್ಪನವರ ಕಾಲು ಹಿಡಿದು ಬಿಜೆಪಿ ಸೇರಿದ್ದು ತನಗೆ ಗೊತ್ತಿಲ್ಲವೇ ಎಂದು ರೇಣುಕಾಚಾರ್ಯ ಹೇಳುತ್ತಾರೆ.
ಬಿವೈ ವಿಜಯೇಂದ್ರ ಪರವಾಗಿ ರಾಷ್ಟ್ರೀಯ ನಾಯಕರೇ ಗೆ ಪತ್ರ ಬರೆದಿದ್ದಾರೆ. ಬಿಎಸ್ ಯಡಿಯೂರಪ್ಪ ಗೆ ವಯಸ್ಸಾಗಿದೆ ಎಂದು ಹೇಳುತ್ತಿದ್ದಾರೆ.ವಯಸ್ಸಾದ ತಂದೆ ತಾಯಿಯನ್ನು ಕಸಾಯಿ ಖಾನೆಗೆ ಕಳುಹಿಸಲು ಆಗುತ್ತಾ? ಅದೇ ರೀತಿ ಬಿಎಸ್ ಯಡಿಯೂರಪ್ಪನವರು ಪಕ್ಷಕ್ಕೆ ತಂದೆ ಇದ್ದಂತೆ ಎಂದು ದಾವಣಗೆರೆಯಲ್ಲಿ ಬಿಜೆಪಿಯ ಮಾಜಿ ಶಾಸಕ ರೇಣುಕಾಚಾರ್ಯ ಹೇಳಿಕೆ ನೀಡಿದರು.