ಹುಬ್ಬಳ್ಳಿ : ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬಿಹಾರ ಮೂಲದ ವ್ಯಕ್ತಿ ಒಬ್ಬ ಹಸುಗಳ ಕೆಚ್ಚಲು ಕೊಯ್ದಿದ್ದ ಘಟನೆ ನಡೆದಿತ್ತು. ಘಟನೆ ಸಂಭಂದ ಪೊಲೀಸರು ಈಗಾಗಲೇ ಆರೋಪಿಯನ್ನು ಅರೆಸ್ಟ್ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇದೀಗ ಈ ಒಂದು ಘಟನೆ ಮಹೋತ್ಸವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೊಂದು ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು ಹೊಟ್ಟೆ ಬಗೆದ ಸ್ಥಿತಿಯಲ್ಲಿ 7 ತಿಂಗಳ ಕರುವಿನ ಶವ ಪತ್ತೆಯಾಗಿದೆ.
ಹೌದು ಹುಬ್ಬಳ್ಳಿ ನಗರದ ಬಣಗಾರ ಲೇಔಟ್‌ನಲ್ಲಿ ಹೊಟ್ಟೆ ಬಗೆದ ಸ್ಥಿತಿಯಲ್ಲಿ ಏಳು ತಿಂಗಳ ಕರುವಿನ ಶವ ಪತ್ತೆಯಾಗಿದೆ. ಕರು ಶರಣಪ್ಪ ಬಾರಕೇರ ಎಂಬುವವರಿಗೆ ಸೇರಿದ್ದು, ಕರುವಿನ ಸಾವಿನ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಕೆಚ್ಚಲು ಕೊಯ್ದ ಪ್ರಕರಣದ ಚರ್ಚೆಗಳು ಇನ್ನೂ ಸಹ ನಡೆಯುತ್ತಿರುವಾಗಲೇ ಇಂತಹದ್ದೇ ಮತ್ತೊಂದು ಕ್ರೌರ್ಯದ ಪ್ರಕರಣ ನಡೆದದ್ದು ಬೆಚ್ಚಿ ಬೀಳಿಸಿದೆ.
ಇನ್ನು ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪಶು ವೈದ್ಯರು ಸಹ ಭೇಟಿ ನೀಡಿ, ಸತ್ತ ಕರುವಿನ ಶವವನ್ನು ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಕರು ನಿಶಕ್ತಿಯಿಂದ ಸಾವನ್ನಪ್ಪಿದ್ದು, ಬಳಿಕ ಯಾವುದೋ ಪ್ರಾಣಿಗಳು ಕರುವಿನ ಹೊಟ್ಟೆಯ ಭಾಗವನ್ನು ತಿಂದಿರಬಹುದು ಎಂದು ಕರುವಿನ ಶವ ಪರೀಕ್ಷಿಸಿ ತಿಳಿಸಿದ್ದಾರೆ.