ವಿಜಯಪುರ : ಕಳೆದ ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಬೇನಾಳ ಗ್ರಾಮದಲ್ಲಿ ನಾಲ್ವರು ಮಕ್ಕಳೊಂದಿಗೆ ಕಾಲುವೆಗೆ ಹಾರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಿಡಗುಂದಿ ಠಾಣೆಯಲ್ಲಿ ತಾಯಿ ಭಾಗ್ಯಶ್ರೀ ವಿರುದ್ಧ ಕೊಲೆ ಕೇಸ್ ದಾಖಲಾಗಿದೆ.
ಹೌದು ಎರಡು ದಿನಗಳ ಹಿಂದೆ ನಿಡಗುಂದಿಯ ಬೇನಾಳ್ ಗ್ರಾಮದಲ್ಲಿ ಆಲಮಟ್ಟಿ ಎಡದಂಡೆಯಲ್ಲಿ ತಾಯಿಯೊಬ್ಬಳು ನಾಲ್ವರು ಮಕ್ಕಳನ್ನು ಕಾಲುವೆಗೆ ಎಸೆದು ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ ಘಟನೆ ನಡೆದಿತ್ತು. ಇದೀಗ ಪ್ರತ್ಯಕ್ಷದರ್ಶಿಯಾದ ಫಾರೆಸ್ಟ್ ಗಾರ್ಡ್ ನಾಗೇಶ್ ಹೇಳಿಕೆಯನ್ನು ಪಡೆದಿರುವ ಪೊಲೀಸರು ನಿಡಗುಂದಿ ಠಾಣೆಯಲ್ಲಿ ಸೆಕ್ಷನ್ 302ರ ಅಡಿ ಕೊಲೆ ಕೇಸ್ ದಾಖಲಿಸಿದ್ದಾರೆ.