ಮೈಸೂರು: ಚಾಮರಾಜನಗರದ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ತವರು ಕ್ಷೇತ್ರ ವರುಣಾ, ನಂಜನಗೂಡಿನಲ್ಲೂ ಮೈಕ್ರೋ ಫೈನಾನ್ಸರ್ ಸಿಬ್ಬಂದಿಗಳ ಕಿರುಕುಳ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಕಿರುಕುಳ ತಾಳಲಾರದೇ ಗ್ರಾಮವನ್ನೇ ತೊರೆಯಲು ಜನರು ಮುಂದಾಗಿದ್ದಾರೆ.
ಮೈಸೂರು ಜಿಲ್ಲೆಯ ವರುಣ ಹಾಗೂ ನಂಜನಗೂಡು ವ್ಯಾಪ್ತಿಯಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಕಿರುಕುಳ ಹೆಚ್ಚಾಗಿದೆ. ಕೊಟ್ಟ ಸಾಲ ವಾಪಾಸ್ ಕಟ್ಟದೇ ಇದ್ದಕ್ಕೆ ಗ್ರಾಮದ ಜನರ ಮನೆಯ ಬಾಗಿಲ ಮೇಲೆಯೇ ನೋಟಿಸ್ ಬೋರ್ಡ್ ರೀತಿಯಲ್ಲಿ ಈ ಸ್ವತ್ತಿನ ಮೇಲೆ ಸಾಲ ಪಡೆದಿರುವುದಾಗಿ ಕಪ್ಪು ಶಾಹಿರಿಯಿಂದ ಬರೆಯಲಾಗಿದೆ.
ಮೈಕ್ರೋ ಫೈನಾನ್ಸ್ ಸಿಬ್ಬಂದಿಯ ಈ ಬರವಣಿಗೆಯಿಂದಾಗಿ ಗ್ರಾಮದ ಜನರು ಮಾನಸಿಕವಾಗಿ ನೋಂದು ಹೋಗಿದ್ದು, ಕಿರುಕುಳಕ್ಕೆ ಬೇಸತ್ತಿದ್ದಾರೆ. ಬಲವಂತವಾಗಿ ಸಾಲ ವಾಪಾಸ್ಸು ನೀಡುವಂತೆಯೂ ಫೈನಾನ್ಸ್ ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ. ಈ ಕಾರಣಕ್ಕೆ ವರುಣ, ನಂಜನಗೂಡು ಕ್ಷೇತ್ರದ ಜನರು ಗ್ರಾಮವನ್ನೇ ತೊರೆಯಲು ಮುಂದಾಗಿದ್ದಾರೆ. ಜೊತೆಗೆ ಈ ಕಿರುಕುಳ ತಪ್ಪಿಸುವಂತೆ ಆಗ್ರಹಿಸಿದ್ದಾರೆ.
ನಾಳೆ ಜಾತಿಗಣತಿ ವರದಿ ಮಂಡನೆ ಇಲ್ಲ, ಊಹಾಪೋಹಗಳನ್ನಾಧರಿಸಿ ವಿರೋಧ ಅನಾವಶ್ಯಕ: ಸಿಎಂ ಸಿದ್ದರಾಮಯ್ಯ