ಬೆಂಗಳೂರು : ಬಾಕಿ ಬಿಲ್ ಹಣ ಬಿಡುಗಡೆಗೆ ಸಂಬಂಧಪಟ್ಟಂತೆ ಗುತ್ತಿಗೆದಾರರು ದಯಾ ಮರಣ ಕೋರಿ ಪತ್ರ ಬರೆದಿರುವ ಕುರಿತಾಗಿ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರು ನೀವು ಏಕೆ ದಯಮರಣ ಕೋರಿ ಪತ್ರ ಬರೆಯುತ್ತೀರಿ ತಪ್ಪಿರುವುದು ಸರ್ಕಾರದಲ್ಲಿ ಒಂದು ವರ್ಷದವರೆಗೆ ನೀವು ಯಾವುದೇ ಕೆಲಸವನ್ನು ಮಾಡಬೇಡಿ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ರಾಜ್ಯದ ಗುತ್ತಿಗೆದಾರರಿಗೆ ಕರೆ ನೀಡಿದರು.
ಬೆಂಗಳೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಸಿಎಂ ಆಗಿದ್ದಾಗ ಯಾರಿಗೂ ಈ ರೀತಿ ತೊಂದರೆ ಕೊಟ್ಟಿಲ್ಲ. ಈ ರಾಜ್ಯವನ್ನು ನೀವು ಉಳಿಸಬೇಕು ಎಂದು ನಿಮ್ಮಲ್ಲಿ ಒಗ್ಗಟ್ಟು ಇದ್ದರೆ ಗುತ್ತಿಗೆದಾರರಿಗೆ ಮನವಿ ಮಾಡುತ್ತೇನೆ ಒಂದು ವರ್ಷದವರೆಗೆ ಕೆಲಸ ಮಾಡಬೇಡಿ ಎಂದು ಅವರು ಕರೆ ನೀಡಿದರು.
ಆಂಧ್ರಪ್ರದೇಶದವರನ್ನಾದರೂ ಕರೆದುಕೊಂಡು ಬಂದು ಕೆಲಸ ಮಾಡಿಸಲಿ. ಯಾರನ್ನಾದರೂ ಕರೆದುಕೊಂಡು ಬಂದು ಕೆಲಸ ಮಾಡಿಸಲಿ ನಿಮ್ಮಲ್ಲಿ ಒಡಕು ಬಂದರೆ ನಿಮ್ಮನ್ನು ಉಪಯೋಗಿಸಿಕೊಳ್ಳುತ್ತಾರೆ. ಇವೆಲ್ಲ ಸರಿಯಾಗಬೇಕು ಅಂದರೆ ಗುತ್ತಿಗೆದಾರರು ಕೆಲಸ ಮಾಡಬೇಡಿ. ಒಂದು ವರ್ಷ ಯಾವುದೇ ಗುತ್ತಿಗೆ ಕೆಲಸವನ್ನು ತೆಗೆದುಕೊಳ್ಳಬೇಡಿ ಎಂದು ತಿಳಿಸಿದರು.
ಯಾವುದೇ ಕಾರಣಕ್ಕೂ ಆತ್ಮಹತ್ಯೆಗೆ ಶರಣಾಗಬೇಡಿ. ದಯಾಮರಣಕ್ಕೆ ಏಕೆ ಅರ್ಜಿ ಹಾಕುತ್ತೀರಾ? ನೀವು ಯಾವ ತಪ್ಪು ಮಾಡಿದ್ದೀರಾ ಅಂತ ಅರ್ಜಿ ಹಾಕುತ್ತೀರಾ? ತಪ್ಪು ಆಗಿರುವುದು ಸರ್ಕಾರದಲ್ಲಿ ತಪ್ಪಿನ ವಿರುದ್ಧ ಹೋರಾಟ ಮಾಡುವ ನಿರ್ಧಾರ ನಿಮ್ಮ ಕೈಯಲ್ಲಿದೆ. ನೀವೇನು ಭಿಕ್ಷುಕರಲ್ಲ ಕೆಲಸ ಮಾಡಿದ್ದೀರಿ ಅದಕ್ಕೆ ತಕ್ಕನಾಗಿ ಪೇಮೆಂಟ್ ಕೇಳುತ್ತಿದ್ದೀರಿ ಎಂದು HD ಕುಮಾರಸ್ವಾಮಿ ತಿಳಿಸಿದರು.
ಪ್ರಾಮಾಣಿಕವಾಗಿ ಕೆಲಸ ಮಾಡಿ ಯಾಕೆ ದಯಾಮರಣ ಕೇಳುತ್ತೀರಿ? ಸಚಿವ ಪ್ರಿಯಾಂಕ ಖರ್ಗೆ ಅವರೇ ನೀವು ಉಡಾಫೆ ಹೇಳಿಕೆ ನೀಡುವುದನ್ನು ಬಿಡಿ. ಹೆಣ್ಣು ಮಕ್ಕಳ ಒಡವೆಯನ್ನು ಬ್ಯಾಂಕ್ ನಲ್ಲಿ ಅಡವಿಟ್ಟು ಕೆಲಸ ಮಾಡಿಸಿದ್ದಾರೆ. ಗುತ್ತಿಗೆದಾರರಿಗೆ ಯಾರ ಬಳಿಯು ತಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ಆಗುತ್ತಿಲ್ಲ ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ಮಾಡಿದರು.