ಮೈಸೂರು : ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಇಂದು ಚಿಕಿತ್ಸೆಗಾಗಿ ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ಆಗಮಿಸಿದ್ದಾರೆ.
ಮೈಸೂರಿನ ಮಣಿಪಾಳ್ ಆಸ್ಪತ್ರೆಯಲ್ಲಿ ಡಾ. ಅಜಯ್ ಹೆಗ್ಡೆ ಅವರು ನಟ ದರ್ಶನ್ ಗೆ ಇಂದು ಚಿಕಿತ್ಸೆ ನೀಡಲಿದ್ದಾರೆ ಎನ್ನಲಾಗಿದ್ದು, ಈ ಸಂಬಂಧ ಇಂದು ನಟ ದರ್ಶನ್ ಆಸ್ಪತ್ರೆಗೆ ಆಗಮಿಸಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರಿಗೆ ಈಗಾಗಲೇ ರೆಗ್ಯುಲರ್ ಬೇಲ್ ಸಿಕ್ಕಿದ್ದು, ಸದ್ಯ ಅವರು ತಮ್ಮ ಪತ್ನಿ, ಮಗ ಹಾಗೂ ಕುಟುಂಬದ ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ.ಅಲ್ಲದೆ ನಟ ದರ್ಶನ್ ಅವರು ಆಪರೇಷನ್ ಗೆ ಒಳಗಾಗುವ ಸಾಧ್ಯತೆಯಿದ್ದು ಈಗಾಗಲೇ ಆಪರೇಷನ್ ಮಾಡಿಸಿಕೊಳ್ಳುವ ಕುರಿತು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎನ್ನಲಾಗಿದ್ದು,
ನಟ ದರ್ಶನ್ ಗೆ ಆಪರೇಷನ್ ಮಾಡುವ ವೈದ್ಯರಾದಂತಹ ಅಜಯ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಆಪರೇಷನ್ ಗೆ ನಟ ದರ್ಶನ್ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಸಂಕ್ರಾಂತಿ ಹಬ್ಬದ ವೇಳೆ ದರ್ಶನ್ ಆಪರೇಷನ್ ಫಿಕ್ಸ್ ಆಗಿದೆ. ಆಪರೇಷನ್ ಬಳಿಕ ಆರೋಗ್ಯದ ಬಗ್ಗೆ ನಿಗಾ ವಹಿಸಬೇಕು. ಒಂದುವರೆ ತಿಂಗಳುವರೆಗೂ ಫೈಟ್ ದೃಶ್ಯದಲ್ಲಿ ಭಾಗಿ ಆಗುವಂತೆ ಇಲ್ಲ ಆದರೆ ಕೇವಲ ಚಿತ್ರಿಕರಣದಲ್ಲಿ ಮಾತ್ರ ಭಾಗಿಯಾಗಬಹುದು ಎನ್ನಲಾಗಿದೆ.
ಬಳ್ಳಾರಿ ಜೈಲಿನಲ್ಲಿದ್ದಾಗ ನಟ ದರ್ಶನ್ ಅವರಿಗೆ ಬೆನ್ನು ನೋವಿನ ಸಮಸ್ಯೆ ಕಾಡಿತ್ತು.ಈ ವೇಳೆ ಅವರು ಬೆನ್ನುನೋವಿನ ಸಮಸ್ಯೆ ಸಮಸ್ಯೆ ಹೈಕೋರ್ಟಿಗೆ ತಿಳಿಸಿ, ಮಧ್ಯಂತರ ಜಾಮೀನು ಪಡೆದುಕೊಂಡಿದ್ದರು. ಬಳಿಕ ಅವರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗದೆ, ರೆಗ್ಯುಲರ್ ಬೇಲ್ ಪಡೆದುಕೊಂಡು ಬಿಡುಗಡೆಯಾಗಿದ್ದರು. ಇದೀಗ ಅವರು ಶಸ್ತ್ರಚಿಕಿಚಿಗೆ ಒಳಗಾಗಲು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ತಿಳಿದುಬಂದಿದೆ.