ಬೆಂಗಳೂರು : ನಿನ್ನೆ ಬೆಂಗಳೂರಿನ ಹೊಯ್ಸಳ ನಗರದಲ್ಲಿ ಆರು ವರ್ಷದ ಬಾಲಕಿಯ ಮೇಲೆ ಬಿಹಾರ್ ಮೂಲದ ವ್ಯಕ್ತಿ ಒಬ್ಬ ಅತ್ಯಾಚಾರ ಎಸಿಗಿದು ಅಲ್ಲಲೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಇದೀಗ ಬಾಲಕಿಯ ಕೊನೆಯ ಕ್ಷಣದ ವಿಡಿಯೋ ವೈರಲ್ ಆಗಿದ್ದು ಸಿಸಿಟಿವಿ ಕ್ಯಾಮೆರಾದಲ್ಲಿ ಈ ಒಂದು ಬಾಲಕಿಯ ಕೊನೆ ಕ್ಷಣದ ವಿಡಿಯೋ ದೃಶ್ಯ ಸೆರೆಯಾಗಿದೆ.
ಶಾಲಾ ಸಮವಸ್ತ್ರದಲ್ಲಿ ಬಾಲಕಿಯು ಒಂದು ರಸ್ತೆಯ ಮೂಲಕ ಓಡೋಡಿ ಬರುತ್ತಿದ್ದಾಳೆ. ಬಾಲಕಿ ಆರೋಪಿಯಿಂದ ತಪ್ಪಿಸಿಕೊಂಡು ಓಡುತ್ತಿರುವ ದೃಶ್ಯ ಒಂದು ಕಡೆ ಸೆರೆಯಾಗಿದೆ. ಬಳಿಕ ಅತ್ಯಾಚಾರ ಎಸಗಿ ಬಿಹಾರ್ ಮೂಲದ ವ್ಯಕ್ತಿ ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರ ಎರಡನೇ ದೃಶ್ಯದಲ್ಲಿ ಬಾಲಕಿಯನ್ನು ಸ್ಥಳೀಯರು ಬೈಕ್ ಮೇಲೆ ಬಾಲಕಿಯನ್ನು ಎತ್ತಿಕೊಂಡು ಆಸ್ಪತ್ರೆಗೆ ಸಾಗಿಸುವ ದೃಶ್ಯ ಮತ್ತೊಂದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ನಿನ್ನೆ ನಗರದ ಹೊಯ್ಸಳ ನಗರದ ವಿನಾಯಕ ಲೇಔಟ್ ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ನಿರ್ಮಾಣ ಹಂತದ ಕಟ್ಟಡದಲ್ಲಿ ಕೃತ್ಯ ನಡೆದಿದ್ದು, ಅದೇ ಕಟ್ಟಡದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ನೇಪಾಳ ಮೂಲದ ಕುಟುಂಬಕ್ಕೆ ಸೇರಿದ ಬಾಲಕಿ ಮೇಲೆ ಬಿಹಾರ ಮೂಲದ ಅಭಿಷೇಕ್ ಎಂಬಾತ ಕ್ರೌರ್ಯ ಮೆರೆದಿದ್ದಾನೆ.ಆರೋಪಿಯನ್ನ ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ರಾಮಮೂರ್ತಿನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನ ಹೆಚ್ಚಿನ ವಿಚಾರಣೆಗೆ ಪೊಲೀಸರು ಒಳಪಡಿಸಿದ್ದಾರೆ.