ಬೆಂಗಳೂರು : ಸಾರ್ವಜನಿಕರ ಎದುರು ಹವಾ ಸೃಷ್ಟಿಸಲು ಪುಂಡರು ಗನ್ ಮಚ್ಚುಗಳನ್ನು ಪ್ರದರ್ಶಿಸಿ ಪುಂಡಾಟ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಬೈಲನರಸಾಪುರದಲ್ಲಿ ನಡೆದಿದೆ.
ಹೌದು ಬೈಲನರಸಾಪುರದಲ್ಲಿ ಗನ್ ಮಚ್ಚು ಹಿಡಿದು ಪುಂಡರ ಅಟ್ಟಹಾಸ ಮೆರೆದಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು, ಸಾರ್ವಜನಿಕರ ಮಧ್ಯೆ ಹವಾ ಸೃಷ್ಟಿಸಲು ಪುಂಡರು ಮಚ್ಚು ಮತ್ತು ಗನ್ ಗಳನ್ನು ಪ್ರದರ್ಶಿಸಿ ಪುಂಡಾಟ ಮೆರೆದಿದ್ದಾರೆ.
ಸಾರ್ವಜನಿಕರಲ್ಲಿ ಹವಾ ಸೃಷ್ಟಿಸಲು ಪುಂಡರು ಗನ್ ಮತ್ತು ಮಚ್ಚುಗಳನ್ನು ಪ್ರದರ್ಶಿಸಿ ಪುಂಡಾಟ ಮೆರೆದಿದ್ದಾರೆ. ಪುಂಡರ ಅಟ್ಟಹಾಸ ಮಿತಿ ಮೀರಿದರೂ ಕೂಡ ಪೊಲೀಸರು ಸೈಲೆಂಟ್ ಆಗಿದ್ದಾರೆ.ನಂದಗುಡಿ ಠಾಣೆಯ ಪೊಲೀಸರ ವಿರುದ್ಧ ಇದೀಗ ಗ್ರಾಮಸ್ಥರು ಅಸಮಾಧಾನ ಹೊರಹಾಕುತ್ತಿದ್ದಾರೆ.ಪುಂಡರ ಅಟ್ಟಹಾಸಕ್ಕೆ ಬ್ರೇಕ್ ಹಾಕುವಂತೆ ಗ್ರಾಮಸ್ಥರು ಇದೀಗ ಒತ್ತಾಯಿಸುತ್ತಿದ್ದಾರೆ.