ಉತ್ತರ ಕನ್ನಡ: ಜಿಲ್ಲೆಯಲ್ಲಿ ಸಂಕ್ರಾಂತಿಯ ದಿನವಾದ ನಿನ್ನೆ ಭೀಕರ ದುರ್ಘಟನೆ ಸಂಭವಿಸಿದೆ. ಜಾತ್ರೆಯ ವೇಳೆಯಲ್ಲಿ ಜನರ ಮೇಲೆಯೇ ಕಾರು ನುಗ್ಗಿಸಲಾಗಿದ್ದು, ಓರ್ವ ಯುವತಿ ಸಾವನ್ನಪ್ಪಿ 8 ಭಕ್ತರು ಗಾಯಗೊಂಡಿರುವಂತ ಘಟನೆ ಸಿದ್ದಾಪುರದಲ್ಲಿ ನಡೆದಿದೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿನ ಅಯ್ಯಪ್ಪ ದೇವಸ್ಥಾನದ ಬಳಿಯಲ್ಲಿ ಭೀಕರ ದುರಂತ ಸಂಭವಿಸಿದೆ. ಜಾತ್ರೆಗಾಗಿ ನೆರಿದಿದ್ದಂತ ಜನರ ಮೇಲೆಯೇ ರೋಷನ್ ಫರ್ನಾಂಡಿಸ್ ಎಂಬಾತ ಕಾರು ನುಗ್ಗಿಸಿದ್ದಾನೆ. ಈ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದಂತ ಯುವತಿಯೊಬ್ಬಳು ಚಿಕಿತ್ಸೆಗೆ ಕರೆದೊಯ್ಯುತ್ತಿದ್ದಾಗ ಮಾರ್ಗಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.
ಇನ್ನೂ ಪೊಲೀಸರು ಹಾಕಿದ್ದಂತ ಬ್ಯಾರಿಕೇಡ್ ಗೆ ಗುದ್ದಿದಂತ ಕಾರು ಚಾಲಕ ರೋಷನ್, ಜಾತ್ರೆಗೆ ಸೇರಿದ್ದಂತ ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆಯೇ ಹರಿಸಿದ್ದಾನೆ. ಇದರಿಂದಾಗಿ 8 ಭಕ್ತರಿಗೆ ಗಾಯವಾಗಿದೆ. ಇವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಸಿದ್ದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.